ಅಂತರಂಗದೊಳಗಿನ ಯಾತ್ರೆ... ಧ್ಯಾನ.
ಈ ಧ್ಯಾನಕ್ರಮದಲ್ಲಿ ನೀವು ಕೇವಲ (20)ಇಪ್ಪತ್ತು ನಿಮಿಷಗಳಲ್ಲಿ ನಿಮ್ಮನ್ನು ನೀವು ಹಗುರಾಗಿಸಿಕೊಳ್ಳಿ -(ವಿರಮಿಸಬಹುದು). ನೀವು ಮಾಡಬೇಕಾದುದಿಷ್ಟೆ- ನೀವು ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಕುಳಿತುಕೊಂಡು, ಈ ಧ್ಯಾನದಲ್ಲಿ ಕೊಡುವಂತಹ ಸೂಚನೆಗಳನ್ನು ಅನುಸರಿಸಬೇಕು, ಅಷ್ಟೆ. ಇದರಿಂದ ನಿಮ್ಮ ದಣಿವನ್ನೆಲ್ಲ ನಿವಾರಿಸಿಕೊಂಡು ವಿಶ್ರಾಮ ಪಡೆದು, ಪುನಃ ನಿಮ್ಮ ಕೆಲಸ ಮುಂದುವರಿಸಲು ಉಲ್ಲಾಸದಿಂದ, ಹೊಸ ಚೈತನ್ಯದಿಂದ ಸಿದ್ಧರಾಗುವಿರಿ
ಗಮನಿಸಿ - ಧ್ಯಾನ ಮಾಡುವಾಗ ನೀವು ಕಣ್ಣುಗಳನ್ನು ಮುಚ್ಚಿಕೊಂಡಿರುವುದು ಒಳ್ಳೆಯದು. ಧ್ಯಾನದ ಕೊನೆಯಲ್ಲಿ ನಿಮಗೆ ಕಣ್ಣುಗಳನ್ನು ತೆರೆಯಲು ಸೂಚನೆ ಕೊಡಲಾಗುತ್ತದೆ.
ಈಗಲೇ ವಿಶ್ರಮಿಸಲು ಸಿದ್ಧರಾಗುವಿರೇನು? ಕೆಳಗಿರುವ ಆಟದ-ಗುಂಡಿಯನ್ನು(play button) ಒತ್ತಿ!
ನೀವೀಗ ವಿಶ್ರಾಮ ಹೊಂದಿದಿರಾ? (ಶ್ರಮ ಪರಿಹಾರವಾಯಿತೇ ?)
ನೀವೀಗ ಇನ್ನೂ ಹೆಚ್ಚಿನ ಪ್ರಯತ್ನ ರಾಹಿತ್ಯ ವಿಶ್ರಾಮವನ್ನು ಪಡೆಯಲಿಚ್ಛಿಸುವಿರಾ? ನೀವೇಕೆ ಧ್ಯಾನವನ್ನು ನುರಿತ ಶಿಕ್ಷಕರಿಂದ ಕೇವಲ ಆರು ಘ್ಹಂಟೆಗಳ ಸಮಯದಲ್ಲಿ ಕಲಿಯಬಾರದು?
ನೀವು ಸಹಜ ಸಮಾಧಿ ಧ್ಯಾನ ಶಿಬಿರಕ್ಕೆ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ಅಲ್ಲಿ ನಿಮಗೊಂದು ಮಂತ್ರವನ್ನು ಕೊಡಲಾಗುತ್ತದೆ. ಮಂತ್ರ ಜಪಿಸುವುದರ ಮುಖಾಂತರ ಮಾಡುವ ಸಹಜ ಸಮಾಧಿ ಧ್ಯಾನವು ಪ್ರಯತ್ನ ರಾಹಿತ್ಯವಾಗಿ ನಿಮ್ಮ ಮನಸ್ಸನ್ನು ಸಮಾಧಾನ ಸ್ಥಿತಿಗೆ ತರುತ್ತಾ, ಕೆಲವೇ ನಿಮಿಷಗಳಲ್ಲಿ ನೀವು ವಿಶ್ರಮಿಸುವಂತೆ ಮಾಡುತ್ತದೆ.
ನಿಮಗೆ ಹತ್ತಿರವಾಗಿ ನಡೆಯುವ ಶಿಬಿರವನ್ನು ಹುಡುಕಿರಿ
ಸಂಬಂಧ ಪಟ್ಟ ಧ್ಯಾನ ಕ್ರಮಗಳು