ಈ ಜಗತ್ತಿನಲ್ಲಿ ಸಾಮಾನ್ಯವಾಗಿ ಎಲ್ಲಿ ಐಶ್ವರ್ಯ (ಒಡೆತನ) ಇರುತ್ತದೆಯೋ ಅಲ್ಲಿ ಮಾಧುರ್ಯ (ಮಧುರತೆ - ಸಿಹಿತನ) ಇರುವುದಿಲ್ಲ, ಎಲ್ಲಿ ಮಾಧುರ್ಯವಿದೆಯೋ ಅಲ್ಲಿ ಐಶ್ವರ್ಯ ಇರುವುದಿಲ್ಲ. ಆದರೆ ಎಲ್ಲಿ ಜೀವನ ಪೂರ್ತಿಯಾಗಿ ಅರಳಿದೆಯೋ ಅಲ್ಲಿ ಐಶ್ವರ್ಯ ಮತ್ತು ಮಾಧುರ್ಯ ಎರಡೂ ಸಹ ಇರುತ್ತದೆ. ಐಶ್ವರ್ಯ ಎಂದರೆ ಈಶ್ವರತ್ವ - ಒಡೆತನ, ಪ್ರಪಂಚದಲ್ಲಿ ಯಾವುದು ಇದೆಯೋ ಅದರ ಒಡೆತನ. ಆಸ್ತಿ ಅಥವಾ ಸಂಪತ್ತನ್ನು ಕೆಲವು ಬಾರಿ ಐಶ್ವರ್ಯ ಎಂದು ಪರಿಗಣಿಸಲಾಗುತ್ತದೆ, ಏಕೆಂದರೆ ಸಂಪತ್ತಿನಿಂದಲೂ ಕೆಲವು ಬಾರಿ ಅಧಿಕಾರವನ್ನು ಚಲಾಯಿಸಬಹುದು.
ಪ್ರೇಮ ಮತ್ತು ಅಧಿಕಾರ ಎರಡೂ ಒಟ್ಟಿಗಿರಲು ಸಾಧ್ಯವೇ?
ಸಾಕ್ಷಾತ್ಕಾರ ಹೊಂದಿದ ವ್ಯಕ್ತಿಯಲ್ಲಿ ಮಾತ್ರ ಒಡೆತನ ಮತ್ತು ಮಧುರತೆ ಎರಡೂ ಇರುತ್ತದೆ. ಶ್ರೀರಾಮನಲ್ಲಿ ಐಶ್ವರ್ಯವಿತ್ತು ಆದರೆ ಮಧುರತೆ ಕೊಂಚವಷ್ಟೇ ಇತ್ತು. ಪರಶುರಾಮನ ಜೀವನ ಕೇವಲ (ಅಧಿಕಾರ)ಒಡೆತನವನ್ನು ಪ್ರತಿಬಿಂಬಿಸುತ್ತದೆ, ಆದರೆ ಮಧುರತೆಯ ಇಲ್ಲ. ಬುದ್ಧ ಮಧುರಯೇ ಮೂರ್ತಿ ವೆತ್ತಂತಿದ್ದ, ಆದರೆ ಅಧಿಪತ್ಯ ಕಡಿಮೆ ಇತ್ತು. ಆದರೆ ಶ್ರೀಕೃಷ್ಣನ ಜೀವನ ಐಶ್ವರ್ಯ ಮತ್ತು ಮಾಧುರ್ಯ ಇವೆರೆಡರ ಮಿಳಿತವನ್ನೊಳಗೊಂಡಿದೆ. ಜೀಸಸ್ ಸಹ ಅಷ್ಟೆ. 'ನಾನೇ ದಾರಿ' ಎಂದು ಹೇಳಿದಾಗ ಅಲ್ಲಿ ಒಡೆತನವಿದೆ, ಆದರೆ ಅವರ ಪ್ರಾರ್ಥನೆ ಮತ್ತು ಪ್ರೀತಿಯಲ್ಲಿ ಮಧುರತೆ ತುಂಬಿದೆ.