ಜೀವನ ಮತ್ತು ಸ್ಮೃತಿಯಲ್ಲಿ ಅರಳುವಿಕೆ

ಸ್ಮೃತಿ ಎಂದರೆ, ನಿಮ್ಮ ಅನುಭವಗಳನ್ನು ಗುರುತಿಸುವುದು ಮತ್ತು ಅವುಗಳನ್ನು ನೆನಪಿನಲ್ಲಿ ಶೇಖರಿಸುವುದು. ನೀವು ಯಾವಾಗಲಾದರೂ ಈ ಸ್ಮೃತಿಯ ಸ್ವಭಾವವನ್ನು ಗಮನಿಸಿದ್ದೀರಾ ? ಅದು ಯವಾಗಲೂ 'ನಕಾರಾತ್ಮತೆ'ಯೊಡನೆ ಜೊತೆಗೂಡುತ್ತದೆ. ಜೀವನ ನೀವು ಸಂತೋಷವಾಗಿರಲು 100 ಅವಕಾಶಗಳನ್ನು ಕೊಡುತ್ತದೆ, ಮತ್ತು ಕೆಲವು 10 ದುಃಖದ ಘಟನೆಗಳನ್ನು ನೀಡುತ್ತದೆ. ಆದರೆ ನಿಮ್ಮ ನೆನಪು ಯಾವುದರೊಂದಿಗೆ ಸೇರಿರುತ್ತದೆ? ಅಲ್ಲೊಂದು ಇಲ್ಲೊಂದು ಕೆಲವು ಸಾರಿ ನಡೆದ ನಕಾರಾತ್ಮಕ ಘಟನೆಗಳೊಂದಿಗೆ ಸೇರಿರುತ್ತದೆ! ಸ್ಮೃತಿ ತುಂಬಾ ವಿಚಿತ್ರವಾದದ್ದು! ನಿಮಗೆ 10 ಹೊಗಳಿಕೆಯ ಮಾತುಗಳನ್ನು ಹೇಳಿ ಕೇವಲ ಒಂದು ಅಪಮಾನಕರವಾದದ್ದನ್ನು ಹೇಳಿದರೆ, ಯಾವುದನ್ನು ನೀವು ಹೆಚ್ಚು ನೆನಪಿನಲ್ಲಿಟ್ಟುಕೊಳ್ಳುತ್ತೀರಿ?