ಯೋಗಾಭ್ಯಾಸಾರ್ಥಿಗಳು ಮಾಡುವ ಸಾಮಾನ್ಯ 5 ತಪ್ಪುಗಳು

ಯೋಗಾಭ್ಯಾಸ ಮಾಡುವ ಯೋಚನೆ ಅದ್ಭುತವಾದದ್ದು ಹಾಗು ಒಳ್ಳೆಯದು ಎನ್ನುವುದರಲ್ಲಿ ಯಾವುದೇ ಸ0ಶಯವಿಲ್ಲ. ಯೋಗ ಬರೀ ದೇಹದ ಅರೋಗ್ಯವಷ್ಟೇ ಅಲ್ಲದೆ ಮಾನಸಿಕ ಹಾಗು ಪರಿಪೂರ್ಣ ಪುಷ್ಟಿಕತೆಗೆ ಉಪಯುಕ್ತವಾದದ್ದು.

ಆದರೆ ಈ ಪ್ರಾಚೀನ ಹಾಗು ನವೀನ ಶೈಲಿಯ ಯೋಗವನ್ನು ಹೊಸದಾಗಿ ಆರ0ಭಿಸುವರು ಸಾಮಾನ್ಯವಾಗಿ ತಪ್ಪುಗಳನ್ನು ಮಾಡುತ್ತಾರೆ.  ಮುಖ್ಯವಾಗಿ ದೇಹದ ಸಡಿಲತೆ / ಸುಲಲಿತೆಯನ್ನು, ಶಕ್ತಿ ಹಾಗೂ ಯೋಗ ಸ್ಥಿತಿಯನ್ನು ತಲುಪಲು ನಿರ0ತರ, ಸತತವಾದ ಅಭ್ಯಾಸ ಹಾಗೂ ತಾಳ್ಮೆಯ ಅಗತ್ಯವಿದೆ.

ಯೋಗಾಭ್ಯಾಸಾರ್ಥಿಗಳು ಮಾಡುವ ಸಾಮನ್ಯ ತಪ್ಪುಗಳು:

1. ವಿದ್ಯಾರ್ಥಿಗಳು ತಮ್ಮ ಜೊತೆಯಲ್ಲಿರುವವರೊ0ದಿಗೆ ಹೋಲಿಕೆ ಮಾಡಿಕೊಳ್ಳುವುದು:

ಯೋಗಾಭ್ಯಾಸದ ತರಗತಿಗಳಲ್ಲಿ ಸಾಮಾನ್ಯವಾಗಿ ತಮ್ಮ ಅಕ್ಕ ಪಕ್ಕದಲ್ಲಿರುವವರೊ0ದಿಗೆ ಹೋಲಿಕೆ ಮಾಡಿಕೊ0ಡು, ಪ್ರಯತ್ನಿಸಿ, ತಮ್ಮ ಶಕ್ತಿ ಸಾಮರ್ಥ್ಯವನ್ನು ಮೀರಿ ಮಾಡಿ ದೇಹವನ್ನು ಆಘಾತಗೊಳಿಸುವುದು. ಇಲ್ಲಿ ನಾವು ತಿಳಿಯಬೇಕೇನೆ0ದರೆ ಎಲ್ಲರ ದೇಹ, ಆಕಾರ, ಸ್ತೂಲ ಬೇರೆ ಬೇರೆಯಾಗಿದೆ. ಕಾರಣಗಳೇನೆ0ದರೆ ಅದು ಅನುವ0ಶಿಕತೆಯಾಗಿರಬಹುದು, ವಯಸ್ಸು, ಆಹಾರ ಪದ್ಧತಿಗಳು, ಆರೋಗ್ಯ-ಅನಾರೋಗ್ಯ, ಹೀಗೆ ಮು0ತಾದವುಗಳ ಮೇಲೆ ಅವಲ0ಬಿತವಾಗಿರುತ್ತದೆ. ಅಷ್ಟೇ ಅಲ್ಲದೆ, ಅವರು ಉತ್ತಮ ನರ್ತಕಿಯಾಗಿರಬಹುದು, ಬಹಳ ವರ್ಷ್ಗಳಿ0ದ ಯೋಗಾಭ್ಯಾಸ ಮಾಡುತ್ತಿರಬಹುದು, ಹುಟ್ಟಿನಿ0ದಲೇ ಅವರ ದೇಹ ಸುಲಲಿತ/ ಸಡಿಲತೆಯಾಗಿರಬಹುದು. ಆದರೆ, ನೀವು ನಿಮ್ಮ ಸಹಜತೆಗೆ ಹಾಗು ದೇಹದ ಅನುಭವಕ್ಕೆ ಒತ್ತುಕೊಡದೆ ದೇಹವನ್ನು ಮತಷ್ಟು ಪರಿಶ್ರಮಕ್ಕೆ ಒಳಪಡಿಸುತ್ತೀರ / ದೇಹವನ್ನು ಹೆಚ್ಹಾಗಿ ದ0ಡಿಸುವ ತಪ್ಪನ್ನು ಖ0ಡಿತವಾಗಿಯು ಮಾಡುತ್ತೀರ.

2. ನಿಮ್ಮ ದೇಹವನ್ನು ಇಪ್ಪತ್ತು ವರುಷಗಳ ಹಿ0ದಕ್ಕೂ ಅಥವಾ ನಾಲ್ಕು ವರುಷಗಳ ಹಿ0ದಕ್ಕೂ, ಅಥವಾ ಹಿ0ದಿನ ತರಗತಿಗೋ ಹೋಲಿಸಿಕೊಳ್ಳುವುದು:

ಜ್ನಾಪಿಸಿಕೊಳ್ಳಿ/ ನೆನೆಪಿಸಿಕೊಳ್ಳಿ ನಿಮಗೆ ಆರು  ವರ್ಷವಿದ್ದಾಗ ? ನೀವು ಚಕ್ರಬ0ಡಿ ಉರುಳಾಟವನ್ನು ಎಷ್ಟೊ0ದು ಸಲಿಸಾಗಿ ಹುಲ್ಲುಹಾಸಿನ ಮೇಲೆ ಮಾಡಿರಬಹುದು ಅಥವಾ ಗ0ಟೆಗಳ ಕಾಲ ಪದ್ಮಾಸನದಲ್ಲಿ ಕುಳಿತಿರಬಹುದು. ಅದು ನೀವು ಬಾಲ್ಯ/ ಚಿಕ್ಕವರಿದ್ದಾಗ, ಇನ್ನೂ ನಿಮ್ಮ ದೇಹ, ಮನಸ್ಸು ಒತ್ತಡಗಳಿಗೆ ಅಥವಾ ನಕಾರಾತ್ಮಕ ಚಿ0ತನೆಗೆ ಒಳಗೊಳ್ಳುವ ಮೊದಲು, ಗ0ಟೆಗಟ್ಟಳೆ ಕಛೇರಿಗಳಲ್ಲಿ ಕೂರುವ ಮೊದಲು, ತಾವು ತಾಯಿಯಾಗುವ ಮೊದಲು, ಅಷ್ಟೇ ಏತಕೆ ನೀವು ಹಿ0ದಿನ ತರಗತಿಗಳಲ್ಲಿ ಅನೇಕ ಆಸನಗಳನ್ನು/ ಭ0ಗಿಗಳನ್ನು ಆರಾಮವಾಗಿ ಮಾಡಿರಬಹುದು, ಆದರೆ “ ಇವತ್ತು” ಆಗಿತ್ತಿಲ್ಲ, Œನೀವು ಮುಖ್ಯವಾಗಿ ತಿಳಿಯಬೇಕೆ0ದರೆ ನೀವು ನಿಮೊಂದಿಗೆ ಅಥವಾ ನಿಮ್ಮ ಶಕ್ತಿಯ , ಸಡಿಲತೆ/ ಸುಲಲಿತೆಯ ಬಗ್ಗೆ ಹೋಲಿಕೆ ಮಾಡಿಕೊಳ್ಳಬೇಡಿ, ಸಮಯ ಹೋಗಿದ್ದು ŒಹೊŒೀಯಿತು. ನಿಮಗೆ ನೀವೇ ಹೇಳಿಕೊಳ್ಳಿ “ ಈ ಕ್ಷ್ಸಣಕ್ಕೆ ನನ್ನ ಉಸಿರಾಟ ಹಾಗು ನನ್ನ ದೇಹದೊಂದಿಗೆ ನಾನು ಇದ್ದೇನೆ”.

3. ತಿಳುವಳಿಕೆಯ ಅಭಾವದಿಂದ ದೇಹವನ್ನು ತೀವ್ರವಾಗಿ ದಂಡಿಸುವುದು:

ಯೋಗಾಭ್ಯಾಸಾರ್ಥಿಗಳು ಸಾಮಾನ್ಯವಾಗಿ ಯೋಚಿಸುವುದು ಏನೆಂದರೆ “ ಯೋಗ ಬಹಳ ಸುಲಭ”, ಎಷ್ಟೇ ಆದರು ನಾನು ಒಬ್ಬ ಕ್ರೀಡಾಪಟು/ ಆಟಗಾರ, ಒಳ್ಳೆ ಕುದುರೆ ಸವಾರ, ಚೆನ್ನಾಗಿ ವ್ಯಾಯಾಮವನ್ನು ಮಾಡುವುವವನು ಅಥವಾ ದೇಹದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವನು , ಆದ್ದರಿಂದ ಯೋಗ ಮಾಡಲು ಯಾವ ತೊಂದರೆಯಿಲ್ಲ ಎನ್ನುವುದು. ಆದರೆ ಹೊರನೋಟಕ್ಕೆ ಯೋಗದ ಆಸನಗಳು/ ಭಂಗಿಗಳು ಬಹಳ ಸುಲಭವಾಗಿ ಕಂಡುಬರುತ್ತದೆ, ಆದರೆ ಅವು ನಿಮ್ಮ ಮಾಂಸಖಂಡ ಹಾಗು ಮೀನಖಂಡಗಳ ಮೇಲೆ ಪ್ರಭಾವ ಬೀರುವುದರಿಂದ, ಅದರ ಬಗ್ಗೆ ಅರಿವಿನಿಂದ ಹಾಗು ಜಾಗರೂಕತೆಯಿಂದ ಮಾಡುವುದು ಬಹಳ ಮುಖ್ಯ, ಸಾಮಾನ್ಯವಾಗಿ ಯೋಗಾಭ್ಯಾಸಾರ್ಥಿಗಳು ತಮ್ಮ ಪ್ರತಿಭೆ, ಸಾಮಥ್ರ್ಯಗಳ ತೋರಿಕೆ ಮಾಡಲು ಹೋಗಿ ದೇಹಕ್ಕೆ ಹಾನಿಯನ್ನುಂಟು ಮಾಡಿಕೊಳ್ಳುತ್ತಾರೆ. ಇಲ್ಲಿ ತಿಳಿಯಬೇಕಾದುದು ಏನೆಂದರೆ ನಮ್ಮ ದೇಹ ಹೆಚ್ಹಿನ ಪರಿಶ್ರಮಕ್ಕೆ ಒಗ್ಗಿರುವುದಿಲ್ಲ, ಇದರಿಂದ ದೇಹ ಬಹಳ ತೊಂದರೆಗಳಿಗೆ ಒಳಗಾಗುತ್ತದೆ. ಆದ್ದರಿಂದ ಯೋಗಾಭ್ಯಾಸಾರ್ಥಿಗಳು ಸರಿಯಾಗಿ ತರಬೇತಿದಾರರು ಕೊಡುವ ಸೂಚನೆಗಳನ್ನು ಅಂತೆಯೇ ನಿಮ್ಮ ದೇಹದ ಬಗ್ಗೆ ತಿಳಿದುಕೊಂಡು ಅಭ್ಯಾಸ ಮಾಡಿರಿ, ಅನವಶ್ಯಕವಾಗಿ ದಂಡಿಸಿಕೊಳ್ಳಬೇಡಿ.

4. ನಿರಂತರ ಅಭ್ಯಾಸ ಮಾಡದಿರುವುದು

ಸಾಮಾನ್ಯವಾಗಿ ಯೋಗಾಭ್ಯಾಸದ ನಂತರ ತುಂಬಾ ಉಲ್ಲಾಸಕರವಾಗಿಯೂ, ಸಮಾಧಾನ ಚಿತ್ತರಾಗಿಯೂ ಇರುತ್ತಾರೆ, ಹಾಗೆಯೇ ತಮ್ಮ ಅನುಭವಗಳನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಕಾತುರರಾಗಿರುತ್ತಾರೆ ಮತ್ತೇ ಅದೇ ಹುಮ್ಮಸಿನಿಂದ ಮರುದಿನವು ತರಗತಿಗಳಿಗೆ ಹಾಜರಾಗುತ್ತಾರೆ ಆದರೆ ಕೆಲಕಾಲದ ನಂತರ ದಿನ ನಿತ್ಯದ ಜೀವನದ ಜಂಜಾಟದಿಂದಲೋ, ಸಾಂಸಾರಿಕ ಜವಾಬ್ದಾರಿಗಳಿಂದಲೋ, ಸಾಮಾಜಿಕ ಒಡಾಟದಿಂದಲೋ, ಯೋಗಾಭ್ಯಾಸ ಮಾಡುವುದು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತದೆ. ಕೆಲವು ದಿನಗಳೋ, ವಾರಗಳ ನಂತರ ಮತ್ತೆ ತರಗತಿಗೆ ವಾಪಾಸಾದಾಗ ಮತ್ತೆ ಹೊಸ ವಿದ್ಯಾರ್ಥಿಗಳಂತೆ ಅನ್ನಿಸುತ್ತದೆ. ಆದ್ದರಿಂದ ಆರಂಭದ ದಿನಗಳಲ್ಲಿ ನಿರಂತರ ಹಾಗು ಸತತವಾದ ಅಭ್ಯಾಸವನ್ನು ಕಡಿಮೆ ಎಂದರೂ ವಾರದಲ್ಲಿ ಎರಡು ಅಥವಾ ಮೂರು ಬಾರಿಯಾದರು ಮಾಡುವುದರಿಂದ ಕ್ರಮೇಣ ದೇಹ ಯೊಗಾಭ್ಯಾಸಕ್ಕೆ ಹಾಗೂ ಹೆಚ್ಚಿನ ಪರಿಶ್ರಮಕ್ಕೆ ಹೊಂದಿಕೊಳ್ಳುತ್ತದೆ.

5. ದೇಹದ ಮೇಲೆ ತಾಳ್ಮೆ ಕಳೆದುಕೊಂಡು, ಹತಾಶರಾಗಿ, ಕೊನೆಗೆ ಯೊಗಾಭ್ಯಾಸವನ್ನೇ ಕ್ಯೆ ಬಿಡುವುದು:

ಯೋಗಾಭ್ಯಾಸವನ್ನು ಆರಂಭಿಸಿದ ಕೆಲವು ವಾರಗಳು, ತಿಂಗಳುಗಳು ಅಥವಾ ವರುಶಗಳು ಮಾಡಿ ನಿರೀಕ್ಷೆಯ ಫಲಿತಾಂಶ ಸಿಗದೆ ಹತಾಶರಾಗಿ ಬಿಡುತ್ತೀರ. ನನ್ನ ದೇಹ ಏಕೆ ಕೆಲವು ಆಸನಗಳನ್ನು ಸರಾಗವಾಗಿ ಮಾಡುತಿಲ್ಲ? ನನಗೇಕೆ ಪಾದಗಳನ್ನು ಮುಟ್ಟಲಾಗುವುದಿಲ್ಲ ಎನ್ನುವ ಪ್ರಶ್ನೆಗಳ ಸುಳಿಯಲ್ಲಿ ಸಿಲುಕಿಕೊಂಡು, ನನಗೆ ಯೋಗಾಭ್ಯಾಸ ಹೊಂದಿಕೆಯಾಗುವುದಿಲ್ಲ ಎಂಬ ನಿರ್ಧಾರಕ್ಕೆ ಬಂದು ಬಿಡುತ್ತೀರಿ. ಆದರೆ ಯೋಗಾಭ್ಯಾಸದ ಸುಂದರತೆ,  ಶೈಲಿ, ವಿಶೇಷತೆ ಏನೆಂದರೆ, ಅದು ಬಹಳ ಸರಳ, ಸೌಮ್ಯವಾದುದು ಹಾಗು ವಿವಿಧ ಹಂತಗಳಲ್ಲಿ ಸೂಕ್ತವಾಗಿ ನಮ್ಮ ದೇಹದ ಮೇಲೆ ಕೆಲಸಮಾಡುತ್ತದೆ. ಯೋಗಾಭ್ಯಾಸದ ಪರಿಣಾಮಗಳ ಬಗ್ಗೆ ಅನುಮಾನ ಬಂದರೆ ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ, ನಿಮ್ಮ ಇಂದಿನ ಮನಸ್ಥಿತಿ, ಮೊದಲಿಗಿಂತ ಎಷ್ಟು ವಿಭಿನ್ನವಾಗಿದೆ, ಕಠಿಣ ಆತಂಕಕಾರಿ ಸಂದರ್ಭಗಳನ್ನು ಎದುರಿಸುವಾಗ ನೀವು ಸುಲಭವಾಗಿ ಹಾಗು ವಿಶಾಲ ಮನೋಭಾವದಿಂದ ವರ್ತಿಸುವುದಿಲ್ಲವೇ ?

ಯೋಗಾಭ್ಯಾಸದಿಂದ ನಿಮ್ಮ ಶ್ವಾಸೋಚ್ವಾಸ ಉಸಿರಾಟ ಉತ್ತಮವಾಗಿ, ನಿಮ್ಮ ದೇಹದ ಕಾರ್ಯ ವೈಖರಿಯ ಬಗ್ಗೆ ನಿಮಗೆ ಹೆಚ್ಚಿನ ಅರಿವು ಉಂಟಾಗಿ, ಹೆಚ್ಚು ಆರಾಮದಿಂದ ಇಲ್ಲŒವೇ? ಈ ಮೇಲಿನ ವಿಚಾರಗಳಲ್ಲಿ ನಿಮಗೆ ಸಹಮತಿ ಇದ್ದಲ್ಲಿ, ನೀವು ಎಲ್ಲಿ ತಪ್ಪು ಮಾಡುತ್ತೀದ್ದೀರಿ ಎಂಬುದು ನಿಮಗೆ ಗೊತ್ತಾಗಿರಬೇಕು. ಆದ್ದರಿಂದ ಮುಂದಿನ ಸಲ ನೀವು ಯೋಗಾಭ್ಯಾಸದಲ್ಲಿ ನಿರತರಾದಾಗ ಈ ತಪ್ಪುಗಳನ್ನು ಪುನರಾವರ್ತಿಸಬೇಡಿ ಹಾಗು ನಿಮ್ಮ ಅಭ್ಯಾಸದಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಿ.e!

 

ಈ ಲೇಖನವನ್ನು ಬರೆದವರು ಚಂದ್ರಿಕಾ ರಾವ್:

ಯೋಗಾಭ್ಯಾಸದಿಂದ ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯ ಅಭಿವ್ರುದ್ದಿಯಗುವುದಾದರು ಇದು ನೀವು ತೆಗೆದುಕೊಳ್ಳಲೇಬೇಕಾದ ಔಷದಗಳಿಗೆ ಪರ್ಯಾಯವಲ್ಲ. ಯೋಗದ ಆಸನಗಳನ್ನು/ ಭಂಗಿಗಳನ್ನು ನುರಿತ ಜೀವನ ಕಲಾ ಯೋಗ ತರಬೇತಿದಾರರಿಂದ ಕಲಿತುಕೊಳ್ಳುವ ಅವಶ್ಯಕತೆಯಿದೆ. ಆರೋಗ್ಯ ತೊಂದರೆಗಳಿದ್ದಲ್ಲಿ, ವ್ಯೆದ್ಯರ ಸಲಹೆ ಪಡೆದ ನಂತರ, ಯೋಗ ತರಬೇತಿದಾರರ ನಿಗಾವಣೆಯಲ್ಲಿ ಅಭ್ಯಾಸ ಮಾಡಿ. ಜೀವನ ಕಲಾ ಯೋಗ ಕಾರ್ಯಕ್ರಮಗಳನ್ನು ನಿಮ್ಮ ಸಮೀಪದ ಜೀವನ ಕಲೆ ಶಿಬಿರದ ಕೇಂದ್ರದಲ್ಲಿ ಕಲಿತುಕೊಳ್ಳಿಹೆಚ್ಚಿನ ಮಾಹಿತಿಗಾಗಿ ಅಥವಾ ನಿಮ್ಮ ಅನಿಸಿಕೆ/ ಅನುಭವಗಳನ್ನು ಹಂಚಿಕೊಳ್ಳಲು ನಮ್ಮನ್ನು info@artoflivingyoga ನಲ್ಲಿ ಸಂಪರ್ಕಿಸಿ