ಗರ್ಭಧಾರಣೆ ಉತ್ಸಾಹದ ಜೊತೆ ದೇಹ ಹಾಗೂ ಮನಸ್ಸಿನಲ್ಲಿ ಸುಮಾರು ಬದಲಾವಣೆ ತರುತ್ತದೆ. ಈ ಸಮಯವನ್ನು ಆನಂದಿಸಲು ಮತ್ತು ಆರಾಮ ಹಾಗೂ ಸಂತೋಷದಿಂದಿರಲು ಕೆಲವು ಸಲಹೆಗಳು.
ಸರಿ ! ಒಳ್ಳಯ ಸಮಾಚಾರ ಬಂದಿದೆ : ನೀವೀಗ ಗರ್ಭಿಣಿ ! ನೀವು ತುಂಬಾ ಉತ್ಸಾಹದಿಂದಿದ್ದೀರಿ. ಒಂದು ಹೊಸ ಜೀವ ನಿಮ್ಮಲ್ಲಿ ವಿಕಾಸವಾಗುತ್ತಿದೆ - ಈ ಭಾವನೆ ವಿವರಿಸಲಾಗದು. ಇದು ಉತ್ಸವದ ಸಮಯ ಮತ್ತು ಪುಟ್ಟ ಮಗುವನ್ನು ನಿಮ್ಮ ಪ್ರಪಂಚಕ್ಕೆ ಬರಮಾಡಿಕೊಳ್ಳುವ ಸಂಭ್ರಮ. ಆದರೂ, ಇದು ದೈಹಿಕವಾಗಿಯೂ ಹಾಗೂ ಮಾನಸಿಕವಾಗಿಯೂ ತುಂಬಾ ಬದಲಾವಣೆ ತರುವ ಸಮಯ, ನಿಮ್ಮ ಮಗುವಿನ ಬೆಳವಣಿಗೆ ಪ್ರತಿ ವಾರ ಆಗುತ್ತಾ ಇದೆ. ಈ ಭಾವನೆಯೆ ರೋಚಕವಾಗಿದೆ. ಅಂತಯೇ, ಇದೇ ಸಮಯದಲ್ಲಿ, ನೀವು ಪ್ರತಿ ವಾರ ಹೊಸಾ ಬೆಳವಣಿಗೆಗಳನ್ನು ಗಮನಿಸುತಿದ್ದೀರ - ಕೆಲವು ನಿಭಾಯಿಸಲು ಸ್ವಾರಸ್ಯಕರ ಹಾಗೂ ಕೆಲವು ನಿಭಾಯಿಸಲು ಕಷ್ಟಕರ.
ಈ ಎಲ್ಲಾ ಪರಿಸ್ಥಿತಿಯನ್ನು ಸಂತೋಷದಿಂದ ಒಪ್ಪಿಕೊಂಡು ನಿಮ್ಮ ಈ ಜೀವನದ ಆನಂದವನ್ನು ಪೂರ್ಣವಾಗಿ ಸವಿಯಲು ಸಾಧ್ಯವಾದರೆ ? ಹೌದು, ಇದು ಸಾಧ್ಯ - ಕೆಲವು ನಿಮಿಷಗಳು ಕಣ್ಣು ಮುಚ್ಚಿ ನಿಮ್ಮಲ್ಲಿ ನೀವು ತಲ್ಲೀನರಾದಾಗ. ಅಷ್ಟೇ ಸರಳ ! ಈಗ ನೋಡೋಣ ನಿಮ್ಮ ಗರ್ಭಧಾರಣೆ ಸಮಯದ ಪ್ರತಿ ಮೂರು ತಿಂಗಳಲ್ಲಿ ಬರುವ ಬದಲವಣೆಗಳನ್ನು ಹಾಗೂ ಅದನ್ನು ಪೂರ್ಣವಾಗಿ ಆನಂದಿಸಲು/ನಿಭಾಯಿಸಲು ಸಲಹೆಗಳು.
ಮೊದಲ ಮೂರು ತಿಂಗಳು
ನಿಮ್ಮಲ್ಲಿ ಆಗುತ್ತಿರುವ ಬೆಳವಣಿಗೆಗಳು:
ದೇಹದಲ್ಲಿ ಹಲವಾರು ತರಹ ಹಾರ್ಮೋನ್ ಗಳ ಬದಲಾವಣೆಯಿಂದಾಗಿ, ನಿಮಗೆ ಬೆಳಗ್ಗೆಯ ವಾಕರಿಕೆ/ಆಲಸ್ಯ, ಎದೆಯುರಿ, ಮಲಬದ್ಧತೆ ಅಥವಾ ಕೆಲವು ಸಾರಿ ಸ್ವಲ್ಪ ತಲೆ ಸುತ್ತು ಬರಬಹುದು. ನಿಮಗೆ ಇಷ್ಟವಾದ ಆಹಾರದಲ್ಲೂ ವಾಕರಿಕೆ ಬರಬಹುದು !
ನಮ್ಮ ಸಲಹೆ:
ಧ್ಯಾನವು ಅತ್ಯಂತ ಪರಿಣಾಮಕಾರಿ , ಅದೂ ಈ ಸಮಯದಲ್ಲಿ ಇಂಥ ಸಮಯದಲ್ಲಿ ಯಾವಾಗ ಶಕ್ತಿಯ ಅಭಾವದ ಅನುಭವ ಮತ್ತು ಚಂಚಲದ ಭಾವ ಇರುವಾಗ, ಧ್ಯಾನದ ಗುಣಪಡಿಸುವ ಪ್ರಕ್ರಿಯೆ ಪ್ರಾಣ ಶಕ್ತಿಯನ್ನು ಹೆಚ್ಚು ಮಾಡಿ ನಿಮ್ಮಲ್ಲಿ ಚೈತನ್ಯವನ್ನು ತುಂಬುತ್ತದೆ. ಈ ಸಮಯದಲ್ಲಿ ನಿಮ್ಮ ದೆಹಕ್ಕೆ ಹೆಚ್ಚು ಚೈತನ್ಯ ಅತ್ಯವಶ್ಯಕವಾಗಿರುತ್ತದೆ ಮತ್ತು ಧ್ಯಾನವು ನಿಮ್ಮಲ್ಲಿ ಪ್ರಕೃತಿ ಸಹಜವಾಗಿ ಇರುವ ಶಕ್ತಿಯ ಮೂಲ.
ವಿಶೇಷವಾಗಿ, ನೀವು ಧ್ಯಾನಸ್ಥರಾದಾಗ, ನಿಮ್ಮ ದೇಹ ಸರಿಯಾದ ಆಹಾರ ಪದ್ಧತಿಗೆ ಸಹಜವಾಗಿ ಹೊಂದಿಕೊಳ್ಳುತ್ತದೆ. ನಿಮಗೆ ಸಹಜವಾಗಿಯೇ ಅನಾರೋಗ್ಯಕರ ಹಾಗೂ ಅಪೌಷ್ಟಿಕ ಆಹಾರದಲ್ಲಿ ಅರುಚಿ ಉಂಟಾಗುತ್ತದೆ. ಇದು ಬೆಳೆಯುತ್ತಿರುವ ಮಗುವಿಗೂ ಕ್ಷೇಮ.
ಪ್ರತಿನಿತ್ಯ ಧ್ಯಾನದ ಅಭ್ಯಾಸ ಇರುವ ಮೇಘನ ಹೇಳುತ್ತಾರೆ "ಯೋಗ ಹಾಗೂ ಧ್ಯಾನ ನನ್ನ ಗರ್ಭಧಾರಣೆಯ ಸಮಯದಲ್ಲಿ ನಿರಂತರವಾಗಿ ಸಹಾಯವಾದ ಅಪೂರ್ವ ಸಲಕರಣೆಗಳು. ಈ ಸಮಯದಲ್ಲಿ, ಸ್ತ್ರೀಯರಿಗೆ ಹಲವಾರು ಕಡುಬಯಕೆಗಳು ಇರುತ್ತದೆ, ಆದರೆ ನನಗೆ ಆರೋಗ್ಯಕರ ವಿವಿಧ ರೀತಿಯ ಹಣ್ಣುಗಳ ಬಯಕೆ - ಕಿತ್ತಳೆ, ಮಾವು, ಇತರೆ. ನನ್ನ ದೇಹ ಚಿಪ್ಸ್ ಹಾಗೂ ಇನ್ನಿತರ ಅನಾರೋಗ್ಯಕರ ಆಹಾರವನ್ನು ತಿರಸ್ಕರಿಸುತ್ತಿತ್ತು”.
ನಿಮ್ಮ ಮಗುವಿಗೆ ಏನಾಗುತ್ತಿದೆಯೆಂದು ನೋಡೋಣ:
ಭ್ರೂಣವು ನಿಧಾನವಾಗಿ ಬೆಳೆಯುತ್ತಾ ಇದೆ - ಕೂದಲು, ಕಣ್ಣು, ಗಂಟಲ ಹುರಿ, ಸ್ನಾಯಗಳು ಒಂದು ರೂಪಕ್ಕೆ ಬರುತ್ತಾಯಿದೆ..
ನಮ್ಮ ಸಲಹೆ:
ಈ ಸಮಯದಲ್ಲಿ, ನಿಮ್ಮ ಮಗುವಿನ ಕಿವಿಗಳು ಬರುತ್ತಾಯಿರುತ್ತದೆ, ಆದ್ದರಿಂದ ಒಳ್ಳೆಯ ಮೃದು ಸಂಗೀತ, ಮಂತ್ರಗಳು, ವೀಣೆಯ ನಾದ ಅಥವಾ ಒಳ್ಳೆ ಸಿನಿಮಾ ನೋಡುವುದು ಶ್ರೇಷ್ಟವಾದ ಮಾದರಿ. ಇದರ ತರಂಗಗಳು, ನಿಮ್ಮ ಮಗುವಿನ ನರ ವ್ಯವಸ್ಥೆಗೆ ಅತ್ಯುತ್ತಮ.
ಈ ಸಮಯದಲ್ಲಿ, ನೀವು ಕೆಲವು ಯೋಗಾಸನಗಳನ್ನು ಮೊದಲ ಆರು ತಿಂಗಳ ಒಳಗೆ ಪ್ರಯತ್ನಿಸಬಹುದು. ಇದು ನಿಮ್ಮ ಗರ್ಭಧಾರಣೆಯ ಸಮಯದಲ್ಲಿ ಆಗುವ ಪ್ರತಿಕೂಲ ಲಕ್ಷಣಗಳನ್ನು ನಿವಾರಿಸುತ್ತದೆ ಮತ್ತು ಸುಲಭ ಪ್ರಸವಕ್ಕೆ ಸಹಾಯಮಾಡುತ್ತದೆ. ಮಾರ್ಜಾರಿಯಾಸನ, ತ್ರಿಕೋಣಾಸನ, ಪವನಮುಕ್ತಾಸನ, ಇವು ಕೆಲವು ಉದಾಹರಣೆಗಳು (ಇನ್ನೂ ಹೆಚ್ಚಿನ ಮಹಿತಿಗಾಗಿ “ಗರ್ಭಧಾರಣೆ ಸಮಯದಲ್ಲಿ ಮಾಡಬಹುದಾದ ಯೋಗಾಸನಗಳು" ನೋಡಿ). ಆದರೆ ಈ ಆಸನಗಳನ್ನು , ನಿಮ್ಮ ವೈದ್ಯರ ಸಲಹೆ ಪಡೆದು ಅಭ್ಯಾಸ ಮಾಡಿ..
ಆಹಾರ ಪದ್ಧತಿಯ ಸಲಹೆ:
ಮೋದಲ ತಿಂಗಳು - ತಣ್ಣನೆ ಹಾಲು ಕುಡಿಯಿರಿ, ಹುಳಿ ಹಾಗೂ ಕಹಿಯಾದ ಆಹಾರದಿಂದ ದೂರವಿರಿ, ಸುಲಭವಾಗು ಪಚನವಾಗುವ ಆಹಾರವನ್ನು ಸೇವಿಸಿ. ಏನಾದರೂ ಮಲಬದ್ಧತೆಯ ಲಕ್ಷಣ ಕಂಡುಬಂದಲ್ಲಿ (ಇದು ಗರ್ಭಿಣಿಯರಲ್ಲಿ ಸಾಮನ್ಯ), ಆಯುರ್ವೇದದ ಔಷಧಿ ಮೃದು ಅನುಲೋಮನ್ ಅಥವಾ ಮಾತ್ರಾವಸ್ತಿ ಸೇವಿಸಿ.
ಅವಶ್ಯವಾಗಿ ನಿಮ್ಮ ಆಯುರ್ವೇದದ ವೈದ್ಯರ ಮೂಲಕ ಸಲಹೆ ಪಡೆದೆ ಔಷಧಿ ಸ್ವೀಕರಿಸಿ.
ಎರಡನೇ ತಿಂಗಳು - ಎರಡನೇ ತಿಂಗಳು - ಕಡಿಮೆ ಪ್ರಮಾಣದ ಪೌಷ್ಟಿಕ ಆಹಾರ ಕಡಿಮೆ ಅಂತರದಲ್ಲಿ ಹಲವಾರು ಬಾರಿ ದಿನವಿಡೀ ಸ್ವೀಕರಿಸಿ ಮತ್ತು ಹಣ್ಣಿನ ರಸದಿಂದ ದೂರವಿರಿ ಏಕೆಂದರೆ, ಅದು ವಾಕರಿಕೆಯ ಲಕ್ಷಣ ತರಬಹುದು. ಹಾಲು, ಅನ್ನ, ಎಳನೀರು, ಗಂಜಿ, ಖೀರ, ತುಪ್ಪ ತುಂಬಾ ಒಳ್ಳೆಯದು.
ಮೂರನೇ ತಿಂಗಳು – ಹಾಲು, ಜೇನುತುಪ್ಪ ಹಾಗು ತುಪ್ಪ ಸ್ವೀಕಾರ ಒಳ್ಳೆಯದು..
ಮೂರರಿಂದ ಆರು ತಿಂಗಳು
ಆರೋಗ್ಯದ ಗರ್ಭಧಾರಣೆಗೆ ಧ್ಯಾನದ ತ್ವರಿತ ಸಲಹೆಗಳು
- ನಿಮ್ಮ ದಿನಚರಿಯಲ್ಲಿ ಪ್ರತಿ ದಿನವೂ ಆದಷ್ಟೂ ನಿರ್ಧಿಷ್ಟ ಸಮಯಗಳಲ್ಲಿ ಧ್ಯಾನ ಮಾಡುವುದು ಉತ್ತಮ ಫಲ ನೀಡುತ್ತದೆ - ಮುಂಜಾನೆ, ಊಟಕ್ಕೆ ಮುನ್ನ ಹಾಗೂ ಸಾಯಂಕಾಲ.
- ಚೆನ್ನಾಗಿ ಸುಖವಾದ ಹಾಗೂ ಪ್ರಶಾಂತವಾದ ಜಾಗವನ್ನು ಆಯ್ಕೆಮಾಡಿಕೊಳ್ಳಿ
- ನಿಮಗೆ ಆತಂಕವಾಗಿದ್ದರೆ, ಅಥವ ಸಹಜ ಚಂಚಲ ಭಾವ ಮೂಡಿದರೆ, ಕೆಲವು ನಿಮಷಗಳು ಧ್ಯಾನದಲ್ಲಿ ಮುಳುಗಿ, ಇದು ನಿಮ್ಮ ಮನಸ್ಸನ್ನು ತಿಳಿಯಾಗಿಸುತ್ತದೆ.
- ಸುಮಧುರವಾದ ವಾದ್ಯ ಅಥವಾ ಮಂತ್ರ ಪಠಣ ಹಾಗೇ ಕಣ್ಣು ಮುಚ್ಚಿಕೊಂಡು ಆಲಿಸಿ. ಇದರಿಂದ ಸ್ವಯಂಚಾಲಿತವಾಗಿ ಧ್ಯಾನವೂ ಆಗುತ್ತದೆ.
ನಿಮ್ಮಲ್ಲಿ ಏನಾಗುತ್ತಿದೆಯೆಂದು ನೋಡೋಣ:
ಗರ್ಭದಲ್ಲಿರುವ ಮಗು ಅಲುಗಾಡಲು ಶುರುಮಾಡುತ್ತದೆ, ನಿಮಗೆ ಹೊಟ್ಟೆಯಲ್ಲಿ ಸಂವೇದನೆ /ಕಚಗುಳಿ ಉಂಟಾಗುತ್ತದೆ. ನಿಮಗೆ ಹಾರ್ಮೋನ್ ಗಳ ಏರುಪೇರಿನಿಂದ ಕೆಲವು ಬಾರಿ ಭವೋದ್ರೆಕದ ಚಂಚಲತೆ ಉಂಟಾಗಬಹುದು...
ನಮ್ಮ ಸಲಹೆ:
ಈ ಸಮಯದಲ್ಲಿ, ನೀವು ಸುಲಭವಾಗಿ ಪದೇಪದೇ ಚಂಚಲತೆಯ ಭಾವೋದ್ರೇಕಕ್ಕೆ ಒಳಗಾಗುತ್ತೀರ, ನಿಮ್ಮ ಪತಿಯೂ ಕೂಡ ಈ ಪರಿಸ್ಥಿತಿಯನ್ನು ತಾಳ್ಮೆಯಿಂದ ನಿಭಾಯಸಲು ಸಿದ್ಧವಿರಬೇಕು. ಆದ್ದರಿಂದ, ನೀವಿಬ್ಬರೂ ಒಟ್ಟಾಗಿ ಕೆಲವು ನಿಮಿಷಗಳು ಪ್ರತಿ ದಿನವೂ ಧ್ಯಾನಸ್ಥರಾದಾಗ, ಇದು ಅತ್ಯಂತ ಪರಿಣಾಮಕಾರಿಯಾಗಿರುತ್ತದೆ. ಇದರಿಂದ ಇಬ್ಬರಲ್ಲೂ ಸಾಮರಸ್ಯ ಇಮ್ಮಡಿಸಿ, ನಿಮ್ಮ ಮನಸ್ಸು ಭಾವೋದ್ವೇಗದ ವೈಪರೀತ್ಯಕ್ಕೆ ಬಲಿಯಗುವದನ್ನು ತಪ್ಪಿಸುತ್ತದೆ..
ನಿಮ್ಮ ಮಗುವಿನಲ್ಲಿ ಏನಾಗುತ್ತಾಯಿದೆಯೆಂದು ನೋಡೋಣ:
ನಿಮ್ಮ ಮಗುವಿನ ಇಂದ್ರಿಯಗಳು ಅಭಿವೃದ್ಧಿಸುತ್ತಿರುತ್ತದೆ; ನಿಮ್ಮ ಮಗು ಕರುಳಿನಲ್ಲಿ ಆಕಳಿಸಬಹುದು ಅಥವಾ ಬಿಕ್ಕಳಿಸಬಹುದು!
ನಮ್ಮ ಸಲಹೆ:
ನಿಮ್ಮ ಎಲ್ಲಾ ಭಾವನೆಯ ಸಂವೇದನೆ ಮಗುವಿಗೂ ಉಂಟಾಗುವುದರಿಂದ, ನೀವು ಸಂತೋಷ, ಆರಾಮ ಹಾಗೂ ಪ್ರಶಾಂತವಾಗಿರುವುದು ಅತಿ ಮುಖ್ಯ. ಸ್ವಯಂಚಾಲಿತವಾಗಿ ನಿಮ್ಮ ಒಂದೊಂದು ಸಂವೇದನೆ ಮಗುವಿನಲ್ಲೂ ಪ್ರತಿಫಲಿಸುತ್ತದೆ. ನಿಮಗೂ ಮತ್ತು ನಿಮ್ಮ ಮಗುವಿಗೂ ಈ ಸಮಯದಲ್ಲಿ ಸಹಜ ಸಮಾಧಿ ಧ್ಯಾನವು ಅತ್ಯುತ್ತಮ. ವಿಶೇಷವಾಗಿ ಗರ್ಭಧಾರಣೆಯ ಸಮಯದಲ್ಲಿ, ನೀವು ಸಹಜ ಮಂತ್ರದ ಧ್ಯಾನ ಮೂರು - ನಾಲಕ್ಕು ಬಾರಿಯೂ ಮಾಡಬಹುದು..
ಆರು ತಿಂಗಳ ನಂತರ
ನಿಮ್ಮಲ್ಲಿ ಏನಾಗುತ್ತಿದೆಯೆಂದು ನೋಡೋಣ:
ನೀವು ನಿಮ್ಮ ಹೆರಿಗೆಯ ದಿನವನ್ನು ಎದುರು ನೋಡುತ್ತಿದ್ದೀರಿ ಮತ್ತು ಈ ಸಮಯ ಅತ್ಯಂತ ಸವಾಲಿನ ಸಮಯವೂ ಕೂಡ. ನಿಮ್ಮ ದೇಹ ಉಬ್ಬುತಿದ್ದಂತೆ ನಿಮಗೆ ಅಸುಖಕರ ಸಂವೇದನೆ ಆಗಬಹುದು. ಹೆಚ್ಚಾದ ತೂಕದಿಂದ ಮತ್ತು ಮಗುವಿನ ಸ್ಥಿತಿ ಪ್ರಸವಕ್ಕೆ ಸುಲಭವಾಗುವ ಪರಿಸ್ಥಿತಿಗೆ ಬರಿತ್ತಿರುವಂತೆ, ನಿಮ್ಮ ಕಿಬ್ಬೊಟ್ಟೆಯ ಭಾಗ ಹಿಗ್ಗಿ ಪೃಷ್ಟದ ಭಾಗದಲ್ಲಿ ಒತ್ತಡದ ಅನುಭವವಾಗುತ್ತದೆ. ನಿಮ್ಮ ಬೆನ್ನಿನಲ್ಲಿ ನೋವು ಕಾಣಬಹುದು ಮತ್ತು ಓಡಾಡಲು ಪ್ರಾಯಾಸವಾಗುತ್ತದೆ..
ನಮ್ಮ ಸಲಹೆ:
ಧ್ಯಾನವು ಮನಸ್ಸನ್ನು ನಿರಾಳಗೊಳಿಸುವದಲ್ಲದೆ, ಮಾನಸಿಕವಾಗಿಯೂ ಮತ್ತು ಭಾವನಾತ್ಮಕವಾಗಿಯು ಪರಿಣಾಮ ಮಾಡುತ್ತದೆ - ಇಡೀ ತನುವು ವಿಶ್ರಮಿಸಲು ಅತ್ಯುತ್ತಮ ದಾರಿ. ಇದರಿಂದ ನಿಮ್ಮ ಬೆನ್ನೆಲುಬಿನೆ ಮೆಲೆ ಒತ್ತಡ ಕಡಿಮೆ ಆಗಿ ನಿಮ್ಮ ಕೊನೆ ಗರ್ಭಧಾರಣೆಯ ಕೊನೆಯ ಹಂತದಲ್ಲಿ ಆರಾಮಗೊಳಿಸುತ್ತದೆ. ನಿಮ್ಮ ಪ್ರಸವ ಸಮಯದಲ್ಲಿ, ಸುದರ್ಶನ ಕ್ರಿಯೆ, ಇದು ಪೂಜ್ಯ ಶ್ರೀ ಶ್ರೀ ರವಿಶಂಕರ ರವರಿಗೆ ಬಂದ ಒಂದು ಏಕೈಕ ವಿಷಿಷ್ಟ ಉಸಿರಿನ ಪ್ರಕ್ರಿಯೆ. ಈದರಿಂದ ಪ್ರಸ್ವದ ಭವಣೆ ತುಂಬಾ ಕಡಿಮೆಯಾಗಿ ಸುಸೂತ್ರವಾಗಿ ಹೆರಿಗೆಗೆ ಸಹಾಯಮಾಡಿ ತಾಯಿ ಹಾಗೂ ಮಗುವಿಗೆ ಮಂಗಳಕರವಾಗಿರುತ್ತದೆ.
ಹೆರಿಗೆಯ ದಿನ ಹತ್ತಿರ ಬರುತ್ತಿದ್ದಂತೆ, ನಿಮ್ಮಲ್ಲಿ ಮತ್ತು ಪರಿಸರದಲ್ಲಿ ಉತ್ಸಾಹ,ಉದ್ವೇಗ ಹೆಚ್ಚುತ್ತಿರುತ್ತದೆ. ನಿಮ್ಮ ಕುಟುಂಬವೂ ಕೂಡ ಉತ್ಸಾಹದಿಂದ ಹೊಸ ಜೀವವನ್ನು ಬರಮಾಡಿಕೊಳ್ಳಲು ಎದುರುನೋಡುತ್ತಿರುತ್ತಾರೆ. ಈ ಉದ್ವೇಗದ ವೈಪರೀತ್ಯದಲ್ಲಿ, ನಿಮ್ಮಲ್ಲಿ ಒತ್ತಡ, ದುಗುಡ ಉಂಟಾಗಬಹುದು. ಮತ್ತೆ ಇಲ್ಲಿ ಧ್ಯಾನವು ಅತ್ಯುತ್ತಮ ಉಪಾಯ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಒಟ್ಟಾಗಿ ಧ್ಯಾನಮಾಡುವುದು ಒಳ್ಳೆ ಉಪಾಯ, ಗುಂಪಿನಲ್ಲಿ ಧ್ಯಾನ ಮಾಡುವುದು ಇನ್ನೂ ಹೆಚ್ಚಿನ ಪರಿಣಾಮ ಮಾಡುತ್ತದೆ. ಅದಲ್ಲದೆ, ಎಲ್ಲರನ್ನೂ ಒತ್ತಡರಹಿತರಾಗಿ, ವಿಶ್ರಾಮ ಹಾಗೂ ಸಂತೋಷದಿಂದಿರಿಸಿ, ಅದೇ ಸಮಯದಲ್ಲಿ, ಏನು ಮಾಡಬೇಕು, ಹೇಗೆ ಮಾಡಬೇಕು ಎಂಬ ವಿವೇಕ ಜಾಗೃತವಾಗುತ್ತದೆ.
ಗರ್ಭಿಣಿಯರಿಗೆ ಒಂದು ವಿಶೇಶ ಸಿಹಿ ತಿನಿಸು ಮಾಡುವ ವಿಧಾನ
ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ಮಾತೆಯರಿಗಾಗಿ ವಿಶೇಷ ಲಡ್ಡು
ಅಂಜೂರ - 250 ಗ್ರಾಂ
ಆಪ್ರಿಕಾಟ್ - 250 ಗ್ರಾಂ
ಕಪ್ಪು ಖರ್ಜೂರ- 250 ಗ್ರಾಂ
ಬಾದಾಮಿ - 100 ಗ್ರಾಂ
ಪಿಸ್ಟಾ (ಉಪ್ಪುರಹಿತ) - 100 ಗ್ರಾಂ
ಸೌತೇಕಾಯಿ ಬೀಜ - 100 ಗ್ರಾಂ
ಸೂರ್ಯಕಾಂತಿ ಹೂವಿನ ಬೀಜ - 100 ಗ್ರಾಂ
ಕುಂಬಳಕಾಯಿ ಬೀಜ - 100 ಗ್ರಾಂ
ಕಲ್ಲಂಗಡಿ ಹಣ್ಣಿನ ಬೀಜ - 100 ಗ್ರಾಂ
ಆಕ್ರೋಡು (ವಾಲ್ನಟ್) - 100 ಗ್ರಾಂ
ಚಾರೂಳಿ (ಚಿರೋಂಜಿ) - 50 ಗ್ರಾಂ
ಜಾಯಿಕಾಯಿ - 3
ಏಲಕ್ಕಿ - 25 ಗ್ರಾಂ
ಕೇಸರಿ - 2 ಚಿಟುಕು
ಸಣ್ಣದಾಗಿ ಅಂಜೂರ, ಖರ್ಜೂರ ಮತ್ತು ಆಪ್ರಿಕಾಟ್ ಕತ್ತರಿಸಿ. ಗೋಡಂಬಿ, ಸೌತೇಕಾಯಿ, ಸೂರ್ಯಕಾಂತಿ, ಕುಂಬಳಕಾಯಿ, ಕಲ್ಲಂಗಡಿ, ವಾಲ್ನಟ್, ಏಲಕ್ಕಿ ಮತ್ತು ಜಾಯಿಕಾಯಿ ಗ್ರೈಂಡರಿನಲ್ಲಿ ಪುಡಿ ಮಾಡಿ. ಎಲ್ಲವನ್ನೂ ಮಿಶ್ರಸಿ , ಹಿಟ್ಟು ಮಾಡಿ ಒಂದು ತಟ್ಟೆಯಲ್ಲಿ ಹರಡಿ. ಇದನ್ನು ಉಂಡೆಯನ್ನಾಗಿ ಮಾಡಿರಿ
ಪ್ರತಿ ದಿನ ಮುಂಜಾನೆ ಒಂದು ಉಂಡುಯನ್ನು ಹಲಿನ ಜೊತೆ ಸೇವಿಸಿ
ಲೇಖಕರು: ಪ್ರೀತಿ- ರಾಜಲಕ್ಷ್ಮೀ, ಸಹಜ ಸಮಾಧಿ ಧ್ಯಾನದ ಶಿಕ್ಷಕರು ಮತ್ತು ಡಾ||ವಿದ್ಯಾ ಆಯುರ್ವೇದ ಪಂಡಿತರು ಇವರ ಕೊಡುಗೆ ಹಾಗೂ ಸಮಾಲೋಚನೆಯೊಂದಿಗೆ.
ವಿಶಿಷ್ಟ ಲಡ್ಡು ತಯಾರಿಸುವ ವಿಧಾನ: ಚಂದ್ರಿಕಾ ರಾವ್, ಅಹಾರ ಪರಿಣಿತರು