ಸುಖ ಸಂತೋಷದ ರಹಸ್ಯಗಳ ಬಗೆಗಿರುವ ತೆನಾಲಿರಾಮನ ಕಥೆಗಳು

ತೆನಾಲಿ ರಾಮಕೃಷ್ಣ - ಜನರು ಅವರನ್ನು ಪ್ರೀತಿ ವಾತ್ಸಲ್ಯಗಳಿಂದ 'ತೆನಾಲಿರಾಮ' ಎಂದೇ ಸ್ಮರಿಸುತ್ತಾರೆ. ಆವರು ಹದಿನಾರನೆಯ ಶತಮಾನದ ಭಾರತ ದೇಶದ ವಿಜಯನಗರ ಸಾಮ್ರಾಜ್ಯದ ಆಸ್ಥಾನ ಕವಿ. ಅವರು ತೆನಾಲಿ ಎಂಬ ಊರಿನವರು. ಇಂದಿಗೂ ಜನರು ಅವರ ವಿನೋದದಿಂದ ಕೂಡಿದ ಅತಿಶಯವಾದ ಬುದ್ಧಿ ಚಾತುರ್ಯ, ವಿವೇಕ ಹಾಗೂ ಪ್ರತಿಭೆಗಳಿಗಾಗಿ ಸ್ಮರಿಸಿಕೊಳ್ಳುತ್ತಾರೆ.

ಜೀವನದಿಂದ ನಾವು ಬಯಸುವುದಾದರೂ ಏನನ್ನು?  ಬಹುಷಃ ನಮ್ಮ ಬಳಿ ಈಗಾಗಲೇ ಉದ್ದ ಪಟ್ಟಿಯೊಂದು ಸಿದ್ಧವಾಗಿರಬಹುದು - ಗಣಿತದ ಪರೀಕ್ಷೆ - ಯಲ್ಲಿ ಶೇಖಡ ನೂರು ಅಂಕಗಳನ್ನು ಗಳಿಸುವುದರಿಂದ ಹಿಡಿದು, 'ಬಂಗೀ ಜಂಪ್' ಕಲಿಯಬೇಕು, ನಮ್ಮ ಮಗಳಿಗೆ ಮದುವೆಯಾಗಬೇಕು....ಎನ್ನುವುದರ ತನಕ ಪಟ್ಟಿ ಇರಬಹುದು. ಏನೇ ಆದರೂ, ಪ್ರತಿಯೊಂದು ಚಟುವಟಿಕೆಯ ಅಂತಿಮಗುರಿಯ ಸಂತೋಷವನ್ನು ಪಡೆಯುವುದೇ ಆಗಿದೆ. ಹೀಗೆ ಸಂತೋಷವನ್ನು ಹುಡುಕುತ್ತಾ ಬದುಕಿರುವ ಬದಲು, ಸಂತೋಷವಾಗಿದ್ದುಕೊಂಡೇ ನಾವು ಜೀವನವನ್ನು ಹೇಗೆ ಸಗಿಸಬಲ್ಲೆವು?

#1: ಸಂತೋಷವಾಗಿರಿ, ಈ ಕ್ಷಣ ! (ವರ್ತಮಾನದಲ್ಲಿ)

ಸೌಮ್ಯವಾಗಿರುವ ಸಮುದ್ರದ ತಂಗಾಳಿಯನ್ನು ಸಂತೋಷವಾಗಿ(ಹಾಯಾಗಿ) ಅನುಭವಿಸುತ್ತಾ, ಜೋಲಿಯ ತೂಗುಯ್ಯಾಲೆಯಲ್ಲಿ ಮಲಗಿಕೊಂಡಿದ್ದ ತೆನಾಲಿರಾಮನ ಗೆಳೆಯನ ಮುಖದಲ್ಲಿ ಕನಸಿನ ಲೋಕದಲ್ಲಿರುವಂತಹ ವಿಶಾಲವಾದ ಮುಗುಳ್ನಗೆಯು ಮುಖದಲ್ಲಿ ಮಿಂಚಿತ್ತು.
ತೆನಾಲಿ : ನಿನ್ನಷ್ಟಕ್ಕೆ ನೀನು ಏಕೆ ಮುಗುಳ್ನಗುತ್ತಿರುವೆ?
ಗೆಳೆಯ : ನಾನು ನಿಜವಾಗಿ ಸಂತೋಷವಾಗಿರಬಹುದಾದ ದಿನದ ಬಗ್ಗೆ ಯೋಚಿಸುತ್ತಿದ್ದೇನೆ.
ತೆನಾಲಿ : ಅದು ಯಾವಾಗ ?
ಗೆಳೆಯ : ಸಮುದ್ರದ ಸನಿಹದಲ್ಲಿ ನನ್ನದೇ ಮನೆಯೊಂದನ್ನು ನಾನು ಹೊಂದಿದಾಗ, ಒಳ್ಳೆಯ ಕಾರು, ಬ್ಯಾಂಕಿನಲ್ಲಿ ಸಾಕಷ್ಟು ಹಣ, ಮುದ್ದಾದ ಹುಡುಗಿಯನ್ನು ಮದುವೆಯಾಗಿ, ನಾಲ್ಕು ಜನ ಗಂಡು ಮಕ್ಕಳನ್ನು ಪಡೆದು, ಅವರನ್ನು ವಿದ್ಯಾವಂತರನ್ನಾಗಿ ಮಾಡಿ, ಅದರಿಂದ ಅವರಿಗೆ ಒಳ್ಳೆಯ ಕೆಲಸ ದೊರಕಿ ಅವರು ಬಹಳಾ ಹಣ ಸಂಪಾದನೆ ಮಾಡುವಂತಾದಾಗ ಮತ್ತು....
ತೆನಾಲಿ : (ಮಧ್ಯೆ ಬಾಯಿಹಾಕುತ್ತಾ) ನನಗದರ ಚಿತ್ರ ಬಂತು, ಆದರೆ ಅಷ್ಟೆಲ್ಲ ಆದ ನಂತರ ನೀನೇನು ಮಾಡುವೆ?
ಗೆಳೆಯ : ಹಾಗಾದಾಗ, ನಾನು ಸುಮ್ಮನ್ನೆ ಕಾಲುಚಾಚಿ ಮಲಗಿ, ವಿಶ್ರಮಿಸಬಹುದು ಹಾಗೂ ಬೀಸುತ್ತಿರುವ ಈ ಮೃದುವಾದ ತಂಗಾಳಿಯನ್ನೂ, ಮುಖದ ಮೇಲೆ ಬೇಳುತ್ತಿರುವ ಸೂರ್ಯನ ಕಿರಣಗಳನ್ನೂ ಅನುಭವಿಸಬಹುದು!
ತೆನಾಲಿ : ಆದರೆ ನನ್ನ ಗೆಳೆಯನೇ, ಈಗಲೂ ನೀನು ಅದನ್ನೇ ಮಾಡುತ್ತಿದ್ದೀಯ, ಅಷ್ಟೆಲ್ಲಾ ಕಷ್ಟದ ಕೆಲಸವನ್ನೇನೂ ಮಾಡದೆಯೇ!
ಸಾಧಾರಣವಾಗಿ ನಾವು ನಮ್ಮ ಸಂತೋಷವನ್ನು ಹೇಗೆ ಮುಂದೆ ಮುಂದೆ ಹಾಕುತ್ತಿರುವೆವು ಎಂಬುದನ್ನು ನೀವು ಗಮನಿಸುವಿರೇನು? ಉದಾಹರಣೆಗೆ - ನೀವು ಶಾಲೆಯಲ್ಲಿದ್ದರೆ ಯೋಚಿಸುವಿರಿ : "ಒಮ್ಮೆ ಈ ಶಾಲೆಯ ಓದು ಮುಗಿಸಿಬಿಟ್ಟರೆ, ನಾನು ಸಂತೋಷವಾಗಿರುತ್ತೇನೆ" ಎಂದು! ಆಮೇಲೆ, ಅದು ಕಾಲೇಜು, ಕೆಲಸ... ಹೀಗೆ ಬೆಳೆಯುತ್ತಾ ಹೋಗುತ್ತದೆ. ಒಂದು ಆಸೆ ಈಡೇರುತ್ತಿದ್ದಂತೆಯೇ ತಾತ್ಕಾಲಿಕವಾಗಿ, ಸಂಟೋಷದ ಭಾವ ಉಂಟಾಗುತ್ತದೆ, ಮತ್ತು ನೀವು ಅದನ್ನು ಇನ್ನೂ ಅರಿಯುವ ಮುನ್ನವೇ ಬೇರೆ ಇನ್ನಾವುದರಲ್ಲೋ ಸಂತೋಷವನ್ನು ಹುಡುಕಲಾರಂಭಿಸುವಿರಿ - 'ನನಗೆ ಸರಿಯಾದ ಜೀವನ ಸಂಗಾತಿ ದೊರೆತಾಗ ಮಾತ್ರ ನಾನು ಖುಷಿಯಾಗಿರುತ್ತೇನೆ, ಮುಂದೆ 'ನನಗೆ ಬಡ್ತಿ ದೊರೆತರೆ ನಾನು ಖುಷಿಯಾಗಿರುತ್ತೇನೆ..... ಮತ್ತು ಈ ಸರಣಿ ಮುಂದುವರೆಯುತ್ತಾ ಹೋಗುತ್ತದೆ.
  ಸಂತೋಷವು ಭವಿಷ್ಯದಲ್ಲಿ ಎಲ್ಲಿಯೂ ಇಲ್ಲ! ಅದರ ಬಗ್ಗೆ ಯೋಚಿಸಿ ನೀವು ನಿನ್ನೆ ಅಥವಾ ನಾಳೆ ಸಂತೋಷವಾಗಿರಬಲ್ಲಿರೇನು? ಅದಕ್ಕಾಗಿ ನೀವು ಯೋಚನೆ ಸಿದ್ಧಮಾಡಬಹುದು, ಆದರೆ ನೀವು ಈ ಕ್ಷಣ, ವರ್ತಮಾನದಲ್ಲಿ ಮಾತ್ರ ಸಂತೋಷವಾಗಿರಲು ಸಾಧ್ಯ, ಹೌದು ತಾನೆ? ನಾವು ಸಂತೋಷವಾಗಿದ್ದುಕೊಂಡು ಜೀವನದಲ್ಲಿ ಎಲ್ಲವನ್ನೂ ಮಾಡುವುದು ಹೇಗಿರುತ್ತದೆ - ಬದಲಿಗೆ ಸಂತೋಷಗಳಿಸಲಿಕ್ಕಾಗಿಯೇ ಎಲ್ಲವನ್ನೂ ಒಂದಾದರ ಮೇಲೊಂದು ಮಾಡುತ್ತಾ ಇರುವುದು ಹೇಗಿರುತ್ತದೆ? ಧ್ಯಾನವೇ ನಿಮಗೆ ಉತ್ತರ.
ಧ್ಯಾನವು ನಿಮ್ಮ ಮನಸ್ಸನ್ನು ವರ್ತಮಾನದ ಕ್ಷಣಕ್ಕೆ ಕರೆತರುತ್ತದೆ - ಎಲ್ಲಿ ನಿಜವಾದ ಸಂತೋಷವಿದೆಯೋ ಅಲ್ಲಿಗೆ ಹಾಗೂ ಪ್ರತಿಯೊಂದು ಕ್ಷಣವೂ ನೀವು ಮುಗುಳ್ನಗುತ್ತಿರಲು ಶಕ್ತಿಯನ್ನು ಕೊಡುತ್ತದೆ.

#2: ನಿಮಗಿರುವುದರಲ್ಲಿ ತೃಪ್ತಿಯಿಂದಿರಿ

ಒಮ್ಮೆ ತೆನಾಲಿರಾಮನು ರಸ್ತೆಯಲ್ಲಿ ಒಬ್ಬ ವ್ಯಕ್ತಿಯು ದೊಡ್ಡದಾದ, ಗುಂಡಗಿರುವ ರಕ್ಷಾಕವಚವನ್ನು ಅವನ ತಲೆಯಮೇಲೆ, ಸೂರ್ಯನಿರುವ ದಿಕ್ಕಿಗೆ ಹಿಡಿದುಕೊಂಡಿರುವುದನ್ನು ನೋಡಿದನು. ಆ ವ್ಯಕ್ತಿಯು ಏನು ಮಾಡಲು ಪ್ರಯತ್ನಿಸುತ್ತಿದ್ದಾನೆಂಬುದನ್ನು ಅರಿಯುವ ಕುತೂಹಲದಿಂದ ತೆನಾಲಿ ರಾಮನು ಅವನ ಬಳಿ ತೆರಳಿ ವಿಚಾರಿಸಿದನು.

ತೆನಾಲಿ : ನೀನೇನು ಮಾಡುತ್ತಿರುವೆ?
ವ್ಯಕ್ತಿ : ನಾನು ಸೂರ್ಯನನ್ನು ಬಚ್ಚಿಡಲು ಪ್ರಯತ್ನಿಸುತ್ತಿದ್ದೇನೆ. ಅವನು ತುಂಬಾ ಪ್ರಕಾಶಮಾನವಾಗಿದ್ದಾನೆ.
ತೆನಾಲಿ : ನನ್ನ ಗೆಳೆಯನೆ, 'ನಿನ್ನನ್ನು ನೀನು ಏಕೆ ಅಷ್ಟೊಂದು ತೊಂದರೆಗೊಳಪಡಿಸಿಕೊಳ್ಳುತ್ತಿರುವೆ? ನಿನ್ನ ಸಮಸ್ಯೆಗೆ ಇನ್ನೂ ಸರಳವಾದ ಪರಿಹಾರ ನನ್ನ ಬಳಿಯಿದೆ'.

ಹೀಗೆ ಹೇಳುತ್ತಾ, ತೆನಾಲಿರಾಮನು ಮರಳಿನ ಕಣವೊಂದನ್ನು ಬಗ್ಗಿ ಕೈಗೆತ್ತಿಕೊಂಡು ಆ ವ್ಯಕ್ತಿಯ ಕಣ್ಣಿಗೆ ಊದಿದನು

ನೀವು ಹೇಗೆ ಯಾವಾಗಲೂ ಆಸೆಗಳ ಹಿಂದೆ ಓಡುತ್ತಿರುವಿರಿ ಎಂದು ಗಮನಿಸಿರುವಿರಾ?... ಆಸೆಗಳು ನೆರವೇರಿದಾಗ ಅವು ನಮಗೆ ಸಂತೋಷ ತರುತ್ತದೆಯೆಂಬ ಭರವಸೆಯಿಂದ ಈ ಓಟ! ಆದರೆ ಹೀಗೆ ಬೆನ್ನಟ್ಟುವುದರಲ್ಲಿ ಈಗಾಗಲೇ ನಿಮ್ಮ ಬಳಿಯಿರುವುದನ್ನು ನೀವು ಅನುಭವಿಸಿ, ಆನಂದಿಸಲಾರಿರಿ. ಈ ಆಸೆಗಳು ನಿಮ್ಮ ಬಳಿಯೇ ಇರುವ ಸೌಂದರ್ಯವನ್ನು ಗ್ರಹಿಸಲು ಬಿಡದ ಕಣ್ಣಿನಲ್ಲಿರುವ ಮರಳಿನ ಕಣಗಳಂತೆ.

ಧ್ಯಾನವು ನಮ್ಮನ್ನು ಈ ಜ್ವರದಿಂದ ಮುಕ್ತರನ್ನಾಗಿಸುತ್ತದೆ ಹಾಗೂ ಈ ಧೂಳಿನ ಕಣಗಳನ್ನು ತೊಳೆದು ಹಾಕಿ ಬಿಡುತ್ತದೆ. ಇದು ನಮಗೆ ಆಂತರಿಕ ಸ್ವಾತಂತ್ರ್ಯವನ್ನು ಮತ್ತು ತೃಪ್ತಿಯನ್ನು ಕೊಡುತ್ತದೆ

#3: ನಿಮ್ಮ ಪರಿಶೀಲನಾ ಶಕ್ತಿಯನ್ನು, ಅನುಭೂತಿಯನ್ನು, ಹಾಗೂ ನಿರೂಪಿಸುವ ಶಕ್ತಿಯನ್ನು ಧ್ಯಾನದಿಂದ ಉತ್ತಮಗೊಳಿಸಿಕೊಳ್ಳಿ

ತೆನಾಲಿರಾಮ ಮತ್ತು ಅವನ ಪತ್ನಿ ಅವರ ಮನೆಗೆ ಯಾವ ಬಣ್ಣ ಬಳಿಸುವುದು ಎಂದು ನಿರ್ಧರಿಸುತ್ತಿದ್ದರು.

ಪತ್ನಿ : ನನಗೆ ಗುಲಾಬಿ ಬಣ್ಣವೇ ಬೇಕು
ತೆನಾಲಿ : ಸರಿಯಾಗಿ ವಿಚಾರ ಮಾಡಿ ಹೇಳುತ್ತಿರುವೆಯಾ? ನಾವು ಪ್ರಕಾಶಮಾನವಾಗಿ ಕಾಣುವ ಬಿಳಿಯ ಬಣ್ಣ ಹಾಕಿದರೆ ಒಳ್ಳೆಯದು.
ಪತ್ನಿ : ನಾನು, ನನ್ನ ಮನಸ್ಸಿನಲ್ಲಿ ನಿರ್ಧರಿಸಿದ್ದೇನೆ - ಗುಲಾಬಿ ಬಣ್ಣವಿದ್ದರೆ ಮಾತ್ರ ನಾನು ಸಂತೋಷಪಡುತ್ತೇನೆ.
ತೆನಾಲಿ (ಅವಳಿಗೆ ಗುಲಾಬಿ ಬಣ್ಣದ ಕನ್ನಡಕವನ್ನು ಕೊಡುತ್ತಾ) :ಒಳ್ಳೆಯದು, ನಿನ್ನಿಷ್ಟದಂತೆಯೇ ಆಗಲಿ. ಈ ಕನ್ನಡಕವನ್ನು ಹಾಕಿಕೋ. ಬರೀ ಗೋಡೆ ಅಷ್ಟೇ ಅಲ್ಲ, ನಾನೂ ಕೂಡಾ ಗುಲಾಬಿ ಬಣ್ಣವಾಗಿಯೇ ಕಾಣ್ತೀನಿ!

ತೆನಾಲಿ ರಾಮ ಏನು ಆಲೋಚನೆ ಮಾಡುತ್ತಿದ್ದ? ಗುಲಾಬಿ ಬಣ್ಣದ ಕನ್ನಡಕವನ್ನು ಹಾಕಿಕೊಳ್ಳುವುದರಿಂದ ಮನೆಯ ಬಣ್ಣ ಗುಲಾಬಿಬಣ್ಣವಾಗಿವುದಿಲ್ಲ.

ಒತ್ತಡವು ನಮ್ಮ ಪರಿಶೀಲನ ಶಕ್ತಿಗೆ ಬಣ್ಣಕಟ್ಟ ಸತ್ಯವನ್ನು ಮರೆಮಾಚಿಸುತ್ತೆ. ಅದರಿಂದಾಗಿ ನಾವು ವಸ್ತು ಪರಿಸ್ಥಿತಿಯನ್ನು ಅದು ಹೇಗಿದೆಯೋ ಹಾಗೆಯೇ ನೋಡುವುದಿಲ್ಲ. ಇದು ಅನೇಕ ಬಾರಿ ತಪ್ಪು ಅರ್ಥ ಕಲ್ಪನೆಗಳಲ್ಲಿ ಕೊನೆಗೊಳ್ಳುತ್ತದೆ ಹಾಗೂ ಮತ್ತಷ್ಟು ಒತ್ತಡವನ್ನು, ಅಧಿಕಗೊಳಿಸುತ್ತದೆ. ಈ ವಿಷಮ ಚಿತ್ರದಿಂದ ಒಬ್ಬರು ತಪ್ಪಿಸಿಕೊಂಡು ಹೊರಗೆ ಬರುವುದಾದರೂ ಹೇಗೆ?

ಧ್ಯಾನವು ನಿಮಗೆ ಸ್ಪಷ್ಟತೆಯನ್ನು ಕೊಡುತ್ತದೆ ಹಾಗೂ ವಸ್ತು ಪರಿಸ್ಥಿತಿ ಹೇಗಿದೆಯೋ ಹಾಗೆಯೇ ನೋಡಲು ಸಹಾಯಮಾಡುತ್ತದೆ

ಧ್ಯಾನದಿಂದ ಪರಿಶೀಲನಾ ಶಕ್ತಿ, ನಿರೂಪಿಸುವ ಶಕ್ತಿ ಹಾಗೂ ಅನುಭೂತಿ - ಈ ಮೂರು ಶಕ್ತಿಗಳು ಉತ್ತಮಗೊಳ್ಳುತ್ತವೆ. ತಪ್ಪು ಅರ್ಥ ಕಲ್ಪನೆಗಳು ಹಾಗೂ ವಿಷಯಗಳನ್ನು, ಸಮಾಚಾರಗಳನ್ನು ಸರಿಯಾಗಿ ಪರಸ್ಪರ ಹಂಚಿಕೊಳ್ಳದೆ ಉಂಟಾಗುವ ಅಂತರವು ಕಡಿಮೆಯಾಗುತ್ತದೆ - ಸಂತೋಷವಾಗಿರುವುದು ಸುಲಭವಾಗುತ್ತದೆ, ಸರಳವಾಗುತ್ತದೆ.

#4: 4. ಎಂತಹ ಪರಿಸ್ಥಿತಿಯಲ್ಲೂ ನಿಮ್ಮ ಮನಸ್ಸನ್ನು ಕಾಪಾಡಿಕೊಳ್ಳಿ

ತೆನಾಲಿರಾಮ ಮತ್ತು ಅವನ ಹೆಂಡತಿ ಗೆಳೆಯನೊಬ್ಬನ ಮದುವೆಗೆ ಹೋಗುತ್ತಿದ್ದರು. ಅವನ ಪತ್ನಿ ಅವಳಲ್ಲಿನ ಅತ್ಯುತ್ತಮ ಸೀರೆಯನ್ನೂ, ಒಡವೆಗಳನ್ನೂ ಧರಿಸಿದಳು.
ಇದ್ದಕ್ಕಿದ್ದಂತೆ ಹಿಂದಿನಿಂದ ಬಂದ ಎತ್ತಿನಗಾಡಿಯೊಂದು ನಿಯಂತ್ರಣ ತಪ್ಪಿ ಇವರೆಡೆಗೆ ತುಂಬ ವೇಗವಾಗಿ ಬಂದಿತು. ತೆನಾಲಿ ತಕ್ಷಣವೇ ತನ್ನ ಪತ್ನಿಯನ್ನು ಅವನೆಡೆಗೆ ಎಳೆದುಕೊಂಡ...ಅವಳನ್ನು ರಕ್ಷಿಸುವ ಈ ಪ್ರಯತ್ನದಲ್ಲಿ ಅವನು ಸಮತೋಲನ ತಪ್ಪಿ, ಇಬ್ಬರೂ ರಸ್ತೆಯ ಬದಿಯಲ್ಲಿದ್ದ ಹಳ್ಳಕ್ಕೆ ಬಿದ್ದರು.

ಪತ್ನಿ(ಕ್ಷೋಭೆಗೊಂಡು):ನೀವೇನು ಮಾಡಿದಿರಿ ಎಂದು ಯೋಚಿಸಿರುವಿರಾ? ನನ್ನ ಸುಂದರವಾದ ಉಡುಗೆಯನ್ನು ಹಾಳುಮಾಡಿದಿರಿ! ಇಂತಹ ಉಡುಗೆಯಲ್ಲಿ ನಾನೀಗ ಮದುವೆಗೆ ಹೋಗಲಾಗುವುದಿಲ್ಲ!
ತೆನಾಲಿ :ಒಳ್ಳೆಯದು, ಹಗಿದ್ದಲ್ಲಿ ಹೊಸ ಉಡುಗೆಯನ್ನು ಕೊಳ್ಳುಲು ಇದು ಸಮಯ... ('ಅವಳಿಗೇನೂ' ಆಗಿಲ್ಲದಿರುವುದಕ್ಕೆ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾ ತನ್ನಷ್ಟಕ್ಕೇ ಮುಗುಳ್ನಗುತ್ತಾನೆ).

ನೀವು ಯವಾಗಲಾದರೂ ಒಳ್ಳೆಯದನ್ನು ಮಾಡಲು ಹೋಗಿ, ಏನೋ ಅಹಿತವಾದುದನ್ನು ಮಾಡುವುದರಲ್ಲಿ ಮುಕ್ತಾಯವಾದಂತಹ ಸಂದರ್ಭಗಳನ್ನು ಎದುರಿಸುವಿರೇನು? ಅಂತಹ (ಸಮಯಗಳು)ಸಂದರ್ಭಗಳು ನಿಮ್ಮನ್ನು ನೀವು ನಿಂದಿಸಿಕೊಳ್ಳುತ್ತಾ, ಅಹಿತಕರ ಭಾವನೆಯಲ್ಲಿ ಕೊನೆಗಾಣುವುದನ್ನು ನೀವು ಗಮನಿಸುವಿರಾ? ಹೀಗೇಕೆ ಆಗುತ್ತದೆಯೆಂದರೆ, ನಿಮ್ಮ ಮನೋಗತ ಒಳ್ಳೆಯದೇ ಇತ್ತು ಎಂಬುದರ ಅರಿವಿನ ಜ್ಞಾನ ಯಾವಾಗಲೂ ಅಲ್ಲಿರುವುದಿಲ್ಲ.

ಮಾಡುವ ಕೆಲಸಗಳಲ್ಲಿ ಎಷ್ಟೋ ಸಾರಿ ಕುಂದುಕೊರತೆಗಳಿರಬಹುದು, ಆದರೆ ಉದ್ದೇಶಗಳು ನಿಷ್ಕಪಟವಾಗಿರಬಹು

ಧ್ಯಾನ ಮಾಡುವುದರಿಂದ ನಮಗೆ ಉದ್ದೇಶವನ್ನು ತಿಳಿವಳಿಕೆಯ ದೃಷ್ಟಿಯಿಂದ ಗಮನಿಸಲು ಸಾಧ್ಯವಾಗಿ, ಆ ಕೆಲಸದಲ್ಲಿನ ನ್ಯೂನತೆಗಳನ್ನು ಸ್ವೀಕಾರ ಮಾಡಬಲ್ಲೆವು. ಇದು ನಮ್ಮ ಮನಸ್ಸನ್ನು ಕಾಪಾಡುತ್ತದೆ ಹಾಗೂ ಏನೇ ಬಂದರೂ ನಾವು ಸಂತೋಷವಾಗಿರಲು ಬಿಡುತ್ತದೆ.

ಶ್ರೀ ಶ್ರೀ ರವಿಶಂಕರರ ಜ್ಞಾನವಾಹಿನಿಯ ಭಾಷಣಗಳಿಂದ

ಬೆರದವರು ಶ್ರೀದೇವೆ ಶ್ರೀವತ್ಸ ; ರಾಜಲಕ್ಷ್ಮೀ ರವರು ನೀಡಿರುವ ಮಾಹಿತಿಗಳ ಆಧಾರಿತ - (ಸಹಜ ಸಮಾಧಿ ಧ್ಯಾನದ ಪರಿಣಿತ ಶಿಕ್ಷಕ).