ಪೋಸ್ಟ್ ಟ್ರಾಮ್ಯಾಟಿಕ್ ಸ್ಟ್ರಿಸ್ ಡಿಸಾರ್ಡರ್ (ಪಿ.ಟಿ.ಎಸ್.ಡಿ) ಅಥವಾ ಆಘಾತಗಳ ನಂತರ ಉಂಟಾಗುವ ಒತ್ತಡವು ಒಬ್ಬರ ಜೀವನವನ್ನೇ ಲ್ಲೋಲಕಲ್ಲೋಲವಾಗಿಸುವುದರಿಂದ ಇದನ್ನು ಕುಶಲತೆಯಿಂದ ನಿಭಾಯಿಸಬೇಕು. ಇಂದು ಪಿ.ಟಿ.ಎಸ್.ಡಿಯಿಂದ ಬಾಧಿತರಾದವರು ಕೇವಲ ಔಷಧಿಗಳಲ್ಲದೆ, ಮಾನಸಿಕ ಪ್ರಕ್ರಿಯೆಗಳಲ್ಲದೆ, ಒತ್ತಡವನ್ನು ನಿವಾರಿಸಿಕೊಳ್ಳಲು ಯೋಗವನ್ನೂ ಅವಲಂಬಿಸಿದ್ದಾರೆ. ಯೋಗವು ಒಂದು ಪ್ರಾಚೀನವಾದ, ಆದರೂ ಅನುಪಮವಾದ ಪ್ರಕ್ರಿಯೆಯಾಗಿದ್ದು, ಇದು ದೇಹ ಮತ್ತು ಮನಸ್ಸಿನ ಮೇಲೆ ಪ್ರಭಾವವನ್ನು ಬೀರುವುದರಿಂದ ಪಿಟಿಎಸ್ಡಿಯಿಂದ ಸುಲಭವಾಗಿ ಹೊರಬರಬಹುದು.
ತಕ್ಷಣವೇ ಒತ್ತಡವನ್ನು ನಿವಾರಿಸಿಕೊಳ್ಳಲು ಕೆಲವು ಸರಳವಾದ ಯೋಗಾಸನಗಳನ್ನು ಇಲ್ಲಿ ನೀಡಲಾಗಿದೆ :
ಕಪಾಲ ಬಾತಿ ಪ್ರಾಣಾಯಾಮ
ಈ ಪ್ರಾಣಾಯಾಮವು ರಕ್ತಚಲನೆಯನ್ನು ಹೆಚ್ಚಿಸಿ ಮುಖದಲ್ಲಿ ಕಾಂತಿಯನ್ನು ತಂದು, ನರವ್ಯವಸ್ಥೆಯನ್ನು ಶಕ್ತಿಯುತವಾಗಿ ಮಾಡುತ್ತದೆ. ಪಿಟಿಎಸ್ಡಿಯಿಂದ ಬಳಲುತ್ತಿರುವವರಿಗೆ ಬಹಳ ಒಳ್ಳೆಯ ಪ್ರಾಣಾಯಾಮ ಇದಾಗಿದ್ದು, ಮೆದುಳಿನ ಕೋಶಗಳನ್ನು ಇದು ಪುನಶ್ಚೇತಗೊಳಿಸಿ ಮನಸ್ಸನ್ನು ಉತ್ಥಾಪಿಸುತ್ತದೆ.
ತಾಡಾಸನ
ಪರ್ವತದ ಭಂಗಿಯಿಂದ ಒತ್ತಡದ, ದಣಿವಿನ ನಿವಾರಣೆಯಾಗುತ್ತದೆ. ದೇಹದ ಒತ್ತಡವನ್ನು ಇದು ನಿವಾರಿಸುವುದಲ್ಲದೆ ಪಿ.ಟಿ.ಎಸ್.ಡಿ ಯ ಪ್ರಭಾವವ ನ್ನು ಈ ಯೋಗಾಸನವು ತಡೆಗಟ್ಟುತ್ತದೆ.
ಕೋನಾಸನ
ಪರ್ವತದ ಭಂಗಿಯಂತೆ ಕೋನಾಸನವೂ ದೇಹದ ಒತ್ತಡವನ್ನು ನಿವಾರಿಸುವುದರಿಂದ ಪಿ.ಟಿ.ಎಸ್.ಡಿ ಯಿಂದ ಬಳಲುತ್ತಿರುವವರಿಗೆ ಇದು ಬಲು ಉತ್ತಮ.
ಮಾರ್ಜರಿ ಆಸನ
ಸರಳವಾದ ಯೋಗಾಸನವು ಇದಾಗಿದ್ದು, ಮಾರ್ಜರಿ ಆಸನವು ರಕ್ತ ಚಲನೆಯನ್ನು ಹೆಚ್ಚಿಸಿ, ಬಹಳ ಪರಿಣಾಮಕಾರಕವಾಗಿ ಮನಸ್ಸನ್ನು ವಿಶ್ರಮಿಸುತ್ತದೆ.
ಸೇತುಬಂಧಾಸನ
ಸೇತುಬಂಧಾಸನವು ಮೆದುಳನ್ನು ಪ್ರಶಾಂತಗೊಳಿಸುತ್ತದೆ, ಒತ್ತಡವನ್ನು, ಆತಂಕವನ್ನು, ಖಿನ್ನತೆಯನ್ನು ಕಡಿಮೆ ಮಾಡುತ್ತದೆ. ಪಿಟಿಎಸ್ಡಿಯನ್ನು ಹತ್ತಿಕ್ಕಲು ಯತ್ನಿಸುತ್ತಿರುವವರಿಗೆ ಸೇತುಬಂಧಾಸನವು ಅತೀ ಸರಳವಾದ ಮತ್ತು ಪರಿಣಾಮಕಾರಕವಾದ ಯೋಗಾಸನವಾಗಿದೆ.
ಶವಾಸನ
ಕೊನೆಯದಾಗಿ ವಿಶ್ರಮಿಸುವ ಆಸನವಾದ ಶವಾಸನವು ದೇಹದ ಕೋಶಗಳ ದುರಸ್ತಿಗೆ ಸಹಾಯ ಮಾಡುವುದಲ್ಲದೆ ದೇಹದ ಒತ್ತಡವನ್ನೂ ನಿವಾರಿಸುತ್ತದೆ. ಈ ಯೋಗಾಸನದಿಂದ ರಕ್ತದೊತ್ತಡ, ಆತಂಕ ಕಡಿಮೆಯಾಗಿ, ಪಿ.ಟಿ.ಎಸ್.ಡಿ ಯಿಂದ ಬಳಲುತ್ತಿರುವವರಿಗೆ ಬಹಳ ಸಹಾಯಕಾರಕವಾಗಿರುತ್ತದೆ.
ಯೋಗಾಭ್ಯಾಸದಿಂದ ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯ ಅಭಿವ್ರುದ್ದಿಯಗುವುದಾದರು ಇದು ನೀವು ತೆಗೆದುಕೊಳ್ಳಲೇಬೇಕಾದ ಔಷದಗಳಿಗೆ ಪರ್ಯಾಯವಲ್ಲ. ಯೋಗದ ಆಸನಗಳನ್ನು/ ಭಂಗಿಗಳನ್ನು ನುರಿತ ಜೀವನ ಕಲಾ ಯೋಗ ತರಬೇತಿದಾರರಿಂದ ಕಲಿತುಕೊಳ್ಳುವ ಅವಶ್ಯಕತೆಯಿದೆ. ಆರೋಗ್ಯ ತೊಂದರೆಗಳಿದ್ದಲ್ಲಿ, ವ್ಯೆದ್ಯರ ಸಲಹೆ ಪಡೆದ ನಂತರ, ಯೋಗ ತರಬೇತಿದಾರರ ನಿಗಾವಣೆಯಲ್ಲಿ ಅಭ್ಯಾಸ ಮಾಡಿ.
ಜೀವನ ಕಲಾ ಯೋಗ ಕಾರ್ಯಕ್ರಮಗಳನ್ನು ನಿಮ್ಮ ಸಮೀಪದ ಜೀವನ ಕಲೆ ಶಿಬಿರದ ಕೇಂದ್ರದಲ್ಲಿ ಕಲಿತುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಅಥವಾ ನಿಮ್ಮ ಅನಿಸಿಕೆ/ ಅನುಭವಗಳನ್ನು ಹಂಚಿಕೊಳ್ಳಲು ನಮ್ಮನ್ನು info@srisriyoga.in ನಲ್ಲಿ ಸಂಪರ್ಕಿಸಿ