ಯೋಗದಿಂದ ಮೈಗ್ರೇನ್ನ ಚಿಕಿತ್ಸೆ

ಮೈಗ್ರೇನ್ ನರಗಳ ಒಂದು ಖಾಯಿಲೆಯಾಗಿದ್ದು, ಇದರಿಂದ ಮಧ್ಯಮ ಮಟ್ಟದ ಮತ್ತು ತೀವ್ರ ಮಟ್ಟದ ತಲೆನೋವು ಪದೇ ಪದೇ ಕಾಣಿಸಿಕೊಳ್ಳುತ್ತದೆ. ಮೈಗ್ರೇನ್ ತಲೆನೋವು ಸಾಮಾನ್ಯವಾಗಿ ತಲೆಯ ಅರ್ಧಭಾಗವನ್ನು ಬಾಧಿಸಿ, ಎರಡು ಗಂಟೆ ಅಥವಾ ಹೆಚ್ಚಿನ ಕಾಲದವರೆಗೆ, ಎರಡು ದಿವಸಗಳಿಗಿಂತಲೂ ಹೆಚ್ಚಾಗಿ ಇರಬಹುದು. ಮೈಗ್ರೇನ್ನ ನೋವಿದ್ದಾಗ ರೋಗಿಗಳ ಶಬ್ದಕ್ಕೆ ಅಥವಾ ಬೆಳಕಿಗೆ ಬಹಳ ಸೂಕ್ಷ್ಮರಾಗಿರುತ್ತಾರೆ. ಮೈಗ್ರೇನ್ನ ಇತರ ಲಕ್ಷಣಗಳೆಂದರೆ ವಾಕರಿಕೆ, ವಾಂತಿ, ದೈಹಿಕ ಚಟುವಟಿಕೆಯಿಂದ ನೋವಿನ ಉಲ್ಬಣ.

ಲಂಡನ್ ನಗರದಲ್ಲಿರುವ ಒಂದು ಟ್ರಸ್ಟಿನ ಮಾಹಿತಿಯ ಪ್ರಕಾರ,  ಲಂಡನ್ ನಗರದಲ್ಲಿ  ಮಾತ್ರ ಎಂಟು ದಶ ಲಕ್ಷ ಜನರು ಮೈಗ್ರೇನ್ನಿಂದ ಬಳಲುತ್ತಾರೆ ಮತ್ತು ಪ್ರತಿನಿತ್ಯ ಲಂಡನ್ ನಗರದಲ್ಲಿ 2 ಲಕ್ಷ ಮೈಗ್ರೇನ್ ತಲೆನೋವು ಉಂಟಾಗುತ್ತದೆ. ಇದು, ಉಬ್ಬಸದ ಖಾಯಿಲೆ, ಮಧುಮೇಹಕ್ಕಿಂತ ಇದು ಸಾಮಾನ್ಯವಾಗಿದೆ.

ಇದರಿಂದ ಹೊರಬರುವ ದಾರಿಯೇನು?

ಅನೇಕ ವರ್ಷಗಳಿಂದ ನೀವು ತಲೆ ಸಿಡಿಯುವಂತಹ ನೋವನ್ನು ಅನುಭವಿಸುತ್ತಿದ್ದರೆ ಅಥವಾ ಇತ್ತೀಚೆಗೆ ಮೈಗ್ರೇನ್ ತಲೆನೋವು ಬಂದಿದ್ದರೆ, ಔಷಧಿಗಳೊಡನೆ ಇತರ ರೀತಿಗಳನ್ನು ಬಳಸಿ ನೋವನ್ನು ಮೆಟ್ಟಬಹುದು. ರಕ್ತನಾಳಗಳ ಶಸ್ತ್ರಚಿಕಿತ್ಸೆ, ಸ್ನಾಯುಗಳ ಶಸ್ತ್ರಚಿಕಿತ್ಸೆ, ಆಕ್ಸಿಪಿಟಲ್ ನರದ ಪ್ರಚೋದನೆ, ಬೊಟಾಕ್ಸ್, ಬೀಟಬ್ಲಾಕರ್ಸ್ ಮತ್ತು ಖಿನ್ನತೆಯನ್ನು ತಡೆಗಟ್ಟುವ ಗುಳಿಗೆಗಳಿಂದ ಮೈಗ್ರೇನ್ ತಲೆನೋವನ್ನು ಈಗಿನ ದಿನಗಳಲ್ಲಿ ತಡೆಗಟ್ಟಬಹುದು. ಆದರೆ ಎಚ್ಚರದಿಂದಿರಿ. ಈ ಎಲ್ಲಾ ಚಿಕಿತ್ಸಾ ರೀತಿಗಳೂ ಅಡ್ಡ ಪರಿಣಾಮಗಳನ್ನು ಹೊಂದಿವೆ.  ಈ ಮಾದರಿಯ ಚಿಕಿತ್ಸೆಗಳಿಂದ ಕಡಿಮೆ ರಕ್ತದೊತ್ತಡ, ಹೃದಯಾಘಾತ, ನಿದ್ರಾವಿಹೀನತೆ ಮತ್ತು ವಾಕರಿಕೆಯಂತಹ ಅಡ್ಡ ಪರಿಣಾಮಗಳುಂಟಾಗುತ್ತವೆ.

ದೇಹಕ್ಕೆ ಹಾನಿ ಮಾಡದೆಯೇ ಮೈಗ್ರೇನ್ನ್ನು ಸಹಜವಾಗಿ ತಡೆಗಟ್ಟುವ ದಾರಿಯೇನಾದರೂ ಇದೆಯೆ?

ಅದೃಷ್ಟಾವಶಾತ್ ಹೌದು. ಉತ್ತರವೇ ಯೋಗ.

ನಮ್ಮ ಸಹಾಯಕ್ಕಾಗಿ ಯೋಗ!

ಯೋಗ ಒಂದು ಪ್ರಾಚೀನವಾದ ಪ್ರಕ್ರಿಯೆ ಮತ್ತು ಯೋಗವು ಸಮಗ್ರವಾದ ಜೀವನಶೈಲಿಯಿಂದ, ವಿವಿಧ ಯೋಗಾಸನಗಳಿಂದ, ಉಸಿರಾಟದ ಪ್ರಕ್ರಿಯೆಗಳಿಂದ ನಮ್ಮ ಸಹಾಯಕ್ಕೆ ಬರುತ್ತದೆ. ಮೈಗ್ರೇನನ್ನು ಅಡ್ಡ ಪರಿಣಾಮಗಳಿಲ್ಲದೆ ಯೋಗದಿಂದ ಸದೆಬಡಿಯಬಹುದು. ಪ್ರತಿನಿತ್ಯ ಕೆಲವು ನಿಮಿಷಗಳ ಕಾಲ ಸರಳ ಯೋಗಾಸನಗಳನ್ನು ಮಾಡುತಲಿದ್ದರೆ, ಮತ್ತೊಂದು ಸಲ ಮೈಗ್ರೇನ್ ತಲೆನೋವು ಬಂದರೂ ಅದನ್ನು ತಡೆದುಕೊಳ್ಳಬಹುದು:ಹಸ್ತ ಪಾದಾಸನ

ಹಸ್ತ ಪಾದಾಸನ

ನಿಂತು ಮುಂದಕ್ಕೆ ಬಗ್ಗಿ ಪಾದಗಳನ್ನು ಮುಟ್ಟುವುದರಿಂದ ನರವ್ಯವಸ್ಥೆಗೆ ರಕ್ತಚಲನೆ ಹೆಚ್ಚಿ, ನರವ್ಯವಸ್ಥೆಯ ಉತ್ತೇಜನವಾಗುವುದಲ್ಲದೆ ಮನಸ್ಸೂ ಪ್ರಶಾಂತವಾಗುತ್ತದೆ

ಸೇತುಬಂಧಾಸನ
 

ಸೇತುಬಂಧಾಸನದಿಂದ ಮೆದುಳು ಪ್ರಶಾಂತವಾಗಿ, ಆತಂಕವೂ ಕಡಿಮೆಯಾಗುತ್ತದೆ.

 

ಶಿಶು ಆಸನ 

ಶಿಶು ಆಸನದಿಂದ ನರವ್ಯವಸ್ಥೆಯು ಪ್ರಶಾಂತವಾಗುವುದಲ್ಲದೆ ನೋವೂ ಪರಿಣಾಮಕಾರಕವಾಗಿ ಕಡಿಮೆಯಾಗುತ್ತದೆ.

ಮಾರ್ಜರಿ ಆಸನ 

ಮಾರ್ಜರಿ ಆಸನದಿಂದ ರಕ್ತಚಲನೆಯು ಹೆಚ್ಚಿ ಮನಸ್ಸಿಗೆ ವಿಶ್ರಾಂತಿ ಸಿಗುತ್ತದೆ.

 

ಪಶ್ಚಿಮೊತ್ತಾಸನ

ಎರಡು ಕಾಲುಗಳ ಮುಂದೆ ಬಗ್ಗುವಿಕೆಯ ಈ ಆಸನವು ಮೆದುಳನ್ನು ಪ್ರಶಾಂತಗೊಳಿಸುವುದಲ್ಲದೆ ಒತ್ತಡದ ನಿವಾರಣೆಯೂ ಆಗುತ್ತದೆ. ಈ ಯೋಗಾಸನದಿಂದ ತಲೆನೋವಿನ ನಿವಾರಣೆಯೂ ಆಗುತ್ತದೆ.

ಅಧೋಮುಖಶ್ವಾನಾಸನ

ಅಧೋಮುಖ ವೂಡಿ ನಾಯಿಯ ಭಂಗಿಯೊಳಗೆ ಹೊಕ್ಕುವ ಆಸನದಿಂದ ಮೆದುಳಿಕೆ ರಕ್ತಚಲನೆ ಹೆಚ್ಚಿ ತಲೆನೋವಿನ ನಿವಾರಣೆಯಾಗುತ್ತದೆ.

 

ಪದ್ಮಾಸನ
 

ಪದ್ಮಾಸನದಿಂದ ಮನಸ್ಸು ವಿಶ್ರಮಿಸುತ್ತದೆ ಮತ್ತು ತಲೆನೋವಿನ ನಿವಾರಣೆಯೂ ಆಗುತ್ತದೆ..

ಶವಾಸನ

ಶವಾಸನವು ಆಳವಾದ ಧ್ಯಾನಸ್ಥ ಸ್ಥಿತಿಯ ವಿಶ್ರಾಂತಿ ನೀಡಿ ದೇಹವನ್ನು ಪುನಶ್ಚೇತಗೊಳಿಸುತ್ತದೆ. ಯೋಗಾಭ್ಯಾಸವನ್ನು ಮುಗಿಸಿದ ನಂತರ ಎರಡು ನಿಮಿಷಗಳವರೆಗೆ ಶವಾಸನದಲ್ಲಿ ಮಲಗಿ ವಿಶ್ರಮಿಸಿ.

ಮೈಗ್ರೇನ್ನಿಂದ ತಾಳಲಾರದ ನೋವುಂಟಾಗಿ, ರೋಗಿಗಳ ವೈಯಕ್ತಿಯ ಹಾಗೂ ವೃತ್ತಿ ಜೀವನಗಳೆರಡೂ ಬಾಧಿತವಾಗುತ್ತವೆ. ನಿಮ್ಮ ಪರಿಸ್ಥಿತಿಯನ್ನು ನಿಮ್ಮ ಕುಟುಂಬದವರಿಗೆ, ಸ್ನೇಹಿತರಿಗೆ ಮತ್ತು ಸಹೋದ್ಯೋಗಿಗಳಿಗೆ ವಿವರಿಸಿದರೆ ಅವರಿಂದ ನೈತಿಕ ಹಾಗೂ ಭಾವನಾತ್ಮಕ ಬೆಂಬಲವೂ ನಿಮಗೆ ಸಿಗುತ್ತದೆ. ಅದಲ್ಲದೆ ನಿಮ್ಮ ವೈದ್ಯರ ಸಲಹೆಯನ್ನು ಪಡೆಯದೆಯೇ ಮಾತ್ರೆಗಳ ಸೇವನೆಯನ್ನು ನಿಲ್ಲಿಸಬೇಡಿ. ಯೋಗವನ್ನು ಔಷಧಿಗಳ ಸೇವನೆಗೆ ಪರ್ಯಾಯವಾಗಿ ಬಳಸಬೇಡಿ. ಯೋಗದಿಂದ ಮೈಗ್ರೇನನ್ನು ಸದೆಬಡೆಯುವ ಉತ್ತಮ ಅಸ್ತ್ರ ದೊರಕಿದಂತೆ ಆಗುತ್ತದೆ.

ಈ ಸರಳ ಯೋಗಾಸನಗಳಿಂದ ಮೈಗ್ರೇನ್ನ ದಾಳಿಯಿಂದ ತತ್ತರಿಸಿ ಹೋಗದೆ ನಿಲ್ಲಬಲ್ಲಿರಿ ಮತ್ತು ಬಹುಶಃ ಮೈಗ್ರೇನ್ ನಿಂತು ಹೋಗಲೂಬಹುದು. ಆದ್ದರಿಂದ ನಿಮ್ಮ ಯೋಗದ ಚಾಪೆಯನ್ನು ಹಾಸಿಕೊಂಡು ಪ್ರತಿನಿತ್ಯ ಕೆಲಕಾಲ ವಿಶ್ರಮಿಸಿ ಮತ್ತು ನಿರಂತರವಾಗಿ ನಿಮ್ಮ ಜೀವನದಿಂದ ಮೈಗ್ರೇನನ್ನು ಹೊಡೆದೋಡಿಸಿ!

 

ಯೋಗಾಭ್ಯಾಸದಿಂದ ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯ ಅಭಿವ್ರುದ್ದಿಯಗುವುದಾದರು ಇದು ನೀವು ತೆಗೆದುಕೊಳ್ಳಲೇಬೇಕಾದ ಔಷದಗಳಿಗೆ ಪರ್ಯಾಯವಲ್ಲ. ಯೋಗದ ಆಸನಗಳನ್ನು/ ಭಂಗಿಗಳನ್ನು ನುರಿತ ಜೀವನ ಕಲಾ  ಯೋಗ  ತರಬೇತಿದಾರರಿಂದ ಕಲಿತುಕೊಳ್ಳುವ ಅವಶ್ಯಕತೆಯಿದೆ. ಆರೋಗ್ಯ ತೊಂದರೆಗಳಿದ್ದಲ್ಲಿ, ವ್ಯೆದ್ಯರ ಸಲಹೆ ಪಡೆದ ನಂತರ, ಯೋಗ ತರಬೇತಿದಾರರ ನಿಗಾವಣೆಯಲ್ಲಿ ಅಭ್ಯಾಸ ಮಾಡಿ.

ಜೀವನ ಕಲಾ ಯೋಗ ಕಾರ್ಯಕ್ರಮಗಳನ್ನು ನಿಮ್ಮ ಸಮೀಪದ ಜೀವನ ಕಲೆ ಶಿಬಿರದ ಕೇಂದ್ರದಲ್ಲಿ ಕಲಿತುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಅಥವಾ ನಿಮ್ಮ ಅನಿಸಿಕೆ/ ಅನುಭವಗಳನ್ನು ಹಂಚಿಕೊಳ್ಳಲು ನಮ್ಮನ್ನು info@artoflivingyoga.in ನಲ್ಲಿ ಸಂಪರ್ಕಿಸಿ.