ಒಳ್ಳಯ ಗ್ರೇಡಿನಿಂದ ಪೋಷಕರಿಗೂ ಹಾಗೂ ಶಿಕ್ಷಕರಿಗೂ ಹೆಮ್ಮೆ ತರಲು ವಿಕಾಸವಾಗುತ್ತಿರುವ ಯುವ ವಿದ್ಯಾರ್ಥಿಗಳಿಗೆ ಕೆಲವು ಸುಲಭ ಸಲಹೆಗಳು. ನಿಮ್ಮ ಎಕಾಗ್ರತೆ ಹಾಗು ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿ, ತೀಕ್ಷ್ಣಗೊಳಿಸುವ ಉಪಾಯವೇ ಧ್ಯಾನ...
ನಿಮ್ಮ ಕ್ಲಾಸಿನಲ್ಲಿ ಇತಿಹಾಸದ ಪಾಠ ನಡೆಯುತ್ತಿದೆ. ನಿಮ್ಮ ಪುಸ್ತಕ ನಿಮ್ಮ ಮುಂದೆ ತೆರೆದಿಟ್ಟಿದೆ. ಒಂದು ಪದವನ್ನೂ ಒದದೆ ನೀವು ಅದನ್ನು ಹಾಗೆ ನೊಡುತ್ತಾ ಇದ್ದೀರಿ. ನಿಮ್ಮ ಶಿಕ್ಷಕರು ಯಾವುದೋ ವಿದೇಶಿಯ ಬಾಷೆಯಂತೆ ಕೊರೆಯುತ್ತಿರುವಂತೆ ಭಾಸವಗುತ್ತಿದೆ. ನೀವು ದೈಹಿಕವಾಗಿ ಇದ್ದರೂ, ನಿಮ್ಮ ಮನಸ್ಸು ಇನ್ನೆಲ್ಲೋ ಇದೆ...
ಇದು ದಿನ ನಿತ್ಯ ನಡೆಯುವ ಸಾಮನ್ಯ ಘಟನೆಯಂತೆ ತೋರುತ್ತಿದೆಯೆ ? ಒಂದು ಬೋರಿಂಗ್ ಅಥವ ನಿಮಗೆ ನೀರಸವಾಗಿರುವ ವಿಷಯ ಓದುವ ಸನ್ನಿವೇಶವನ್ನು ನಿಮಗೆ ಅತ್ಯಂತ ಇಷ್ಟವಿರುವ ಕಾದಂಬರಿ ಓದುವ ಸನ್ನಿವೇಶ ಹೋಲಿಸಿದರೆ ಏನನ್ನಿಸುತ್ತದೆ ? ನಾವು ಟೀವಿ ನೋಡುವಾಗ ಕಣ್ಣು ಮಿಟುಕಿಸದೆ ಗಂಟೆಗಟ್ಟಲೆ ನೋಡುತ್ತೀವಿ, ಆದರೆ, ಇಷ್ಟವಿಲ್ಲದ ಪಠ್ಯ ವಿಷಯ ಅರ್ಧ ಪುಟ ಓದಲು ಒದ್ದಾಡುತ್ತೀರ ಅಲ್ಲವೇ ?
ಪೋಷಕರಲ್ಲಿ ಹಾಗೂ ಶಿಕ್ಷಕರಲ್ಲಿ ಸಾಮಾನ್ಯ ದೂರು ಅಂದರೆ ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯ ಕೊರತೆ ಮತ್ತೆ ಇದು ವಿದ್ಯಾರ್ಥಿಗಳ ಅತಿ ದೊಡ್ಡ ನಿರಂತರ ಸವಾಲು. ವಿಪರ್ಯಾಸವೆಂದರೆ, ಏಕಾಗ್ರತೆ ತುಂಬಾ ಅಗತ್ಯವಿರುವಾಗೆ, ಅದರ ಕೊರತೆ ಹೆಚ್ಚುತ್ತದೆ ಉದಾಹರಣೆಗೆ ಪರೀಕ್ಷೆಗಾಗಿ ರಾತ್ರಿಯೆಲ್ಲಾ ಓದಬೇಕಾದಾಗ ಇದರ ಸಮಸ್ಯೆ ಇನ್ನೂ ಬಾಧಿಸುತ್ತದೆ. ನಿಮಗೆ ಒಳ್ಳೆಯ ಸುದ್ದಿ - ಇದಕ್ಕೆಲ್ಲಾ ಪರಿಹಾರ ಸುಲಭ ಸಾಧಕ ಧ್ಯಾನ. .
ಹಲವಾರು ಸಂಶೋಧನೆಯಿಂದ ದೃಡಪಟ್ಟಿರಿವ ವಿಷಯವೆಂದರೆ, ಧ್ಯಾನದ ಅಭ್ಯಾಸ ತಪ್ಪದೆ ಮಾಡುವರಲ್ಲಿ ಮನಸ್ಸು ಕೇಂದ್ರೀಕ್ರುತವಾಗಿರುತ್ತದೆ. ನೀರಸವೆನಿಸುವ ವಿಷಯದಲ್ಲೂ ಕೂಡ ಸಂಪೂರ್ಣ ಏಕಾಗ್ರತೆ ಬರುತ್ತದೆ. ಒಂದು ಉದಾಹರಣೆ ತೆಗೆದುಕೊಳ್ಳುವುದಾದರೆ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಸೊಂಶೋಧನೆ ಪ್ರಕಾರ, ಕೆಲವೇ ನಿಮಿಷಗಳ ನಿತ್ಯ ಧ್ಯಾನದ ಅಭ್ಯಾಸವಿರುವರಲ್ಲಿ, ಏಕಾಗ್ರತೆ ಹಾಗು ಸಾಧನೆಯಲ್ಲಿ ಗಮನಸೆಳೆಯುವಂತಹ ಬೆಳವಣಿಗೆ ಕಾಣಬಹುದು.
ನಿಮ್ಮ ಜೀವನದ ನಿರ್ಣಾಯಕ ಸಮಯಗಳಲ್ಲಿ, ಅತಿ ಎಚ್ಚರದಿಂದ ಎದುರಿಸುವ ಸಮಯದಲ್ಲಿ ಹೆಗೆ ಧ್ಯಾನದಿಂದ ಕಾಪಾಡಿಕೊಳ್ಳಬಹುದು ಎಂಬ ಬಗ್ಗೆ ಹಲವಾರು ಸಲಹೆಹಳಿವೆ.
ಕೆಲವು ಸಲಹೆಗಳು:
#1ನೀವು ಅಧ್ಯಯನ ಮಾಡುವ ಪಠ್ಯಗಳನ್ನು ಆರಾಧಿಸಿ, ಉತ್ತಮ ದರ್ಜೆಯ ಫಲಿತಂಶ ಪಡೆಯಿರಿ.
ಇದು ಒಂದು ರಹಸ್ಯ. ನೀವು ಓದುವ ಪಠ್ಯದಲ್ಲಿ ಪ್ರೇಮವಿದ್ದಾಗ, ನಿರಾಯಾಸವಾಗಿ ಮನಸ್ಸು ಕೇಂದ್ರೀಕೃತವಾಗುತ್ತದೆ ಮತ್ತೆ ನಿಮ್ಮ ಗಮನ ಪೂರ್ಣವಾಗಿ ಮಗ್ನವಾಗಿರುತ್ತದೆ. ಒಂದು ವೇಳೆ ನಿಮಗೆ ರಾಸಯನ ಶಾಸ್ತ್ರ ಅಧ್ಯಯನದಲ್ಲಿ ಸಮಸ್ಯೆ ಇದ್ದಲ್ಲಿ, ಅ ವಿಷಯದ ಪುಸ್ತಕ ಇಟ್ಟುಕೊಂಡು "ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ" - ಎಂದು ಹೇಳಿಕೊಳ್ಳಿ, ವ್ಯತ್ಯಾಸ ನೋಡಿ. ಒಂದು ಕ್ರಿಕೆಟ್ ಮ್ಯಾಚ್ ಅಥವ ಒಳ್ಳೆಯ ಸಿನಿಮಾ ನೋಡಲು ನಿಮಗೆ ಏಕಾಗ್ರತೆಯ ಅಭ್ಯಾಸ ಬೇಕಾ ? ಸ್ವಯಂಚಾಲಿತವಾಗಿರುತ್ತದೆ ಅಲ್ಲವೆ ? ಇದೇ ತತ್ತ್ವ ನಿಮ್ಮ ಪಠ್ಯಕ್ಕೂ ಅನ್ವಯಿಸುತ್ತದೆ. ನಿಮಾ ಪಠ್ಯವನ್ನು ಇಷ್ಟ ಪಡಿ, ನಿಮ್ಮ ಏಕಾಗ್ರತೆ ಹೆಚ್ಚಿಕೊಳ್ಳಿ. ಫಲಿತಾಂಶ - ಉತ್ತಮ ಅಂಕಗಳು.
#2 ನಿತ್ಯವೂ ಯೋಗಾಭ್ಯಾಸ ಮಾಡಿ ಬೇಸರದಿಂದ ಮುಕ್ತವಾಗಿ.
ಯೋಗಾಸನಗಳು ಅದರಲ್ಲೂ ಸೂರ್ಯನಮಸ್ಕಾರ ಅಥವ ಸರ್ವಾಂಗಾಸನ ಮೆದುಳಿಗೆ ರಕ್ತ ಸಂಚಾರ ಹೆಚ್ಚಿಸುತ್ತದೆ. ಇದರಿಂದಾಗಿ, ನಿಮಲ್ಲಿ ಅರಿವು, ಪ್ರಜ್ಞೆ ಹೆಚ್ಚಾಗುತ್ತದೆ. ನಿಮ್ಮ ಮನಸ್ಸು ಇನ್ನೆಲ್ಲೋ ಹೋಗದೆ ನಿಮ್ಮ ಒದಿನಲ್ಲಿ ಸ್ಥಿರವಾಗಿ ನಿಂತು ನಿಮ್ಮ ಸಾಧನೆಗೆ ಸಹಾಯಮಾಡುತ್ತದೆ.
#3 ಮನರಂಜನೆಗೆ ಇನ್ನೂ ಸಮಯ ಬೇಕೇ ? ಪ್ರಣಾಯಾಮ ಮಾಡಿ.
ಎರಡುವರೆ ನಿಮಿಷಗಳ ಪ್ರಾಣಾಯಾಮವು ನಿಮ್ಮಗೆ ಮೂರು ಗಂಟೆ ಏಕಾಗ್ರತೆ ಕೊಡುತ್ತದೆಂದು ಗೊತ್ತಿತ್ತೆ ? ಹೌದು, ಏಕಾಗ್ರತೆಗಾಗಿ ಪ್ರಾಣಾಯಾಮ, ಇದು ಜೀವನ ಕಲೆ ಯುವ ಶಿಬಿರಾಲ್ಲಿ ಹೇಳಿಕೊಡಲಾಗುತ್ತದೆ. ಇದು ನಿಮ್ಮ ನೆನೆಪಿನ ಹಾಗು ಜ್ಞಾಪಕ ಶಕ್ತಿ ಹೆಚ್ಚಿಸಿ, ಕಡಿಮೆ ಸಮಯದಲ್ಲಿ ನಿಮ್ಮ ದೈನಿಕ ಅಧ್ಯಯನ ಮುಗಿಸಲು ಸಹಾಯ ಮಾಡುತ್ತದೆ, ಇದರಿಂದ ನಿಮ್ಮ ಉಳಿದ ಸಮಯವನ್ನು ನಿಮ್ಮಗಿಷ್ಟವಾದ ಹವ್ಯಾಸದಲ್ಲಿ ಅಥವ ಸ್ನೇಹಿತರೊಡನೆ ಕಳೆಯಬಹುದು - ಅಮೋಘವಲ್ಲವೇ ? ನೀವು ಜೀವನ ಕಲಾ ಶಿಬಿರದಲ್ಲಿ ಕೂಡಲೇ ನೋಂದಾಯಿಸಿ ಈ ಅದ್ಭುತವಾದ ಕಲೆಯನ್ನು ಪಡೆಯಿರಿ.
#4 ಸುದರ್ಶನ ಕ್ರಿಯೆಯ ದೈನಿಕ ಅಭ್ಯಾಸದಿಂದ, ದೈನಂದಿನ ಜೀವನ ವಿನೋದಮಯ
ಪರಿಣಾಮಕಾರಿಯಾದ ಸಮಯ ನಿರ್ವಹಣೆ, ಉನ್ನತ ಗ್ರೇಡ್, ಮನಃ ಕೇಂದ್ರಿಕರಿಸುವ ಶಕ್ತಿ, ಬವಿಷ್ಯತ್ತಿಗೆ ಅನುಕೂಲವಾಗುವಂತಹ ಸರಿಯಾದ ಮಾರ್ಗ ಆಯ್ಕೆಮಾಡಿಕೊಳ್ಳುವ ಶಕ್ತಿ, ಸಂಬಂಧಗಳಲ್ಲಿ ಸಾಮರಸ್ಯ/ಸನ್ನಡತೆ, ಸ್ಪರ್ಧಾತ್ಮಕತ ಪರಿಸ್ಥಿತಿಯನ್ನು ಆತ್ಮವಿಶ್ವಾಸದಿಂದ ಭಾಗವಹಿಸುವಿಕೆ, ನಿಮ್ಮ ಸಹಪಾಠಿಗಳಿಂದ ಉಂಟಾಗುವ ಒತ್ತಡಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಶಕ್ತಿ,ಕೋಪ, ಮುಂತಾದ ನಕಾರತ್ಮಕ ಅತಿರೇಕದಿಂದ ಬಿಡುಗಡೆ, ಇನ್ನೇನೇ ಸಮಸ್ಯೆ ಹೇಳಿ, ಸುದರ್ಶಕ್ರಿಯಯಿಂದ, ಅದಕ್ಕೆಲ್ಲಾ ಉತ್ತರ ಇದೆ ! ಈ ವಿನೂತನ ಹಾಗು ಎಕೈಕ ಉಸಿರಿನ ಪ್ರಕ್ರಿಯೆ ಶ್ರೀ ಶ್ರೀ ರವಿಶಂಕರ ಗುರುಜಿಯವರಿಂದ ಬಂದ ಕೊಡುಗೆ, ನಮ್ಮ ಮನಸ್ಸಿನ ಯೋಚನೆಗಳ ವೇಗವನ್ನು ನಿಯಂತ್ರಿಸಿ, ನಿಮ್ಮನು ಏಕಗ್ರಚಿತ್ತರಾಗಿಸುತ್ತದೆ. ನಿಮ್ಮಗೆ ಅತ್ಯಂತ ಅವಶ್ಯಕತೆಯಿರುವ ಸಮಯದಲ್ಲಿ ನಿಮ ಏಕಾಗ್ರತೆ ಹೆಚ್ಚಿಸುತ್ತದೆ.
#5 ನಿಮ್ಮ ಪ್ರಕ್ಷುಬ್ಧ ಮನಸ್ಸು ನಿಯಂತ್ರಿಸಲು ಆರೊಗ್ಯವಾದ ಅಹಾರ ಶೈಲಿಯನ್ನು ಬೆಳೆಸಿಕೊಳ್ಳಿ.
ಒಳ್ಳೆಯ ಆಹಾರಾಭ್ಯಾಸ, ಮನಸ್ಸಿನ ತಲ್ಲೀನ ಶಕ್ತಿಯ ಮೇಲೆ ಪ್ರಭಾವ ಬೀರುತ್ತದೆ. ನೀವು ಜಾಸ್ತಿ ಸಿಹಿ, ಚಾಕೊಲೇಟ್, ಐಸ್ಕ್ರೀಂ, ಇತರ ಆಹಾರದಿಂದ ಮನುಸ್ಸು ಚಡಪಡಿಕೆಗೊಳಗಾಗುತ್ತದೆ - ಇದರಿಂದ ಸ್ವಾಭಾವಿಕವಾಗೆ ನಿಮ್ಮ ಅಧ್ಯಯನದಲ್ಲಿ ಕಡಿಮೆ ಸಮಯ ವ್ಯಯಿಸುತ್ತೀರಿ - ಈ ಹೋಂದಾಣಿಕೆಯನ್ನು ಸುಲಭವಾಗಿ ಗಮನಿಸಬಹುದು ಅಲ್ಲವೆ ? ಆದ್ದರಿಂದಿ ನೀವು ತಿನ್ನುವ ಆಹಾರವನ್ನು ಪ್ರಜ್ಞೆಯಿಂದ ಆಯ್ಕೆಮಾಡಿ. ತುಂಬಾ ಮಸಾಲೆ, ಸಿಹಿ ಇರುವ ಅಹಾರವನ್ನು ವಿಸರ್ಜಿಸಿ. ಅನಾರೋಗ್ಯಕರ ಹಾಗು ಕರಿದ ಆಹಾರವನ್ನು ಆದಷ್ಟೂ ಕಡಿಮೆ ಮಾಡಿ, ಅದರಲ್ಲೂ ಮಧ್ಯಾಹ್ನದ ವೇಳೆ, ನಿಮ್ಮ ಹೋಮ್ ವರ್ಕ್ ಮಾಡಲು ಕುಳಿತಾಗ. ಈ ಆಹಾರಗಳಿಂದ ಆಲಸ್ಯ, ನಿರುತ್ಸಾಹ ಉಂಟಾಗುತ್ತದೆ,. ನಿಮ್ಮ ಆಹಾರದಲ್ಲಿ ಜಾಸ್ತಿ ತಾಜ ತರಕಾರಿ, ಹಣ್ಣುಗಳು, ಹಣ್ಣಿನ ರಸ ಮತ್ತು ಸಾಲಡ್ ಗಳ್ಳನ್ನು ಸೇರಿಸಿ.
ವಿ.ಸೂ: ಆಯುರ್ವೇದದ ಔಷದಿ ಕೂಡ ನಿಮ್ಮ ಏಕಾಗ್ರತೆ ಹೆಚ್ಚಿಸಲು ಪರಿಣಾಮಕಾರಿಯಾಗಿರುತ್ತದೆ. ಉ.ದಾ ದೇವವಟಿ ಮತ್ತು ಬ್ರಾಹ್ಮಿ. ದಯವಿಟ್ಟು ಶ್ರೀ ಶ್ರೀ ಆಯುರ್ವೇದದ ವೈದ್ಯರನ್ನು ಸಂಪರ್ಕಿಸಿ, ಆಯುರ್ವೆದದ ಆಹರ ಪದ್ಧತಿ ಹಾಗು ಪೂರಕ ಪೌಷ್ಟಿಕ ಅಭ್ಯಾಸದ ವಿಷಯವನ್ನು ಸಮಾಲೋಚಿಸಿ.
#6 ಆಳವಾದ ನಿದ್ದೆ ಮಾಡಿ. ಇತಿಹಾಸದ ಕ್ಲಾಸಿನಲ್ಲಿ ಆಗ ನೀವು ನಿದ್ದೆಗೆ ಬೀಳಲ್ಲ.
ನಿದ್ರಾಹೀನತೆಯಿಂದ ನಿಮ್ಮಲ್ಲಿ ಅಸಹನತೆ ಹೆಚ್ಚಿಸಿ , ನಿಮ್ಮ ಸುತ್ತ ಮುತ್ತಲು ಏನಾಗುತ್ತಿದೆ ಎಂಬ ಅರಿವು ನಿಮ್ಮಲ್ಲಿ ಕಡಿಮೆ ಮಾಡುತ್ತದೆ. ಆದ್ದರಿಂದ ನಿಮ್ಮ ದೇಹ ಹಾಗು ಮನಸ್ಸನ್ನು ಚನ್ನಾಗಿ ವಿಶ್ರಮಿಸಿ. ಎಂಟು ಗಂಟೆಯ ಒಳ್ಳೆ ನಿದ್ದೆ ಮತ್ತು ಆದಷ್ಟೂ ಬೆಳಗ್ಗೆ ಅಥವ ಊಟಕ್ಕೆ ಮೊದಲು ನಿತ್ಯ ೨೦ ನಿಮಿಷಗಳ ಧ್ಯಾನ ಮಾಡಿ. ಇದು ನಿಮಗೆ ದೈಹಿಕ ಹಾಗು ಮಾನಸಿಕ ವಿಶ್ರಾಂತಿ ಕೊಟ್ಟು, ನಿಮ್ಮ ಕ್ಲಾಸಿನಲ್ಲಿ ಮಧ್ಯಾಹ್ನದ ವೇಳೆ ನಿದ್ದೆ ಬರದಂತೆ ತಡೆದು ಪಠದತ್ತ ಪೂರ್ಣ ಗಮನದಲ್ಲಿ ತೊಡಗುವುದಕ್ಕೆ ಸಹಾಯಮಾಡುತ್ತದೆ
ನೀವು ಶಾಲೆಯಲ್ಲಿ, ಮನೆಯಲ್ಲಿ ಅಥವ ಸ್ನೇಹಿತರ ಜೊತೆ ಪಾರ್ಕಿನಲ್ಲಿ ಒಟ್ಟಾಗಿಯಾದರೂ ಧ್ಯಾನ ಮಾಡಿ ! ಅದರಲ್ಲೂ ಒಟ್ಟಗಿ ಧ್ಯಾನ ಮಾಡುವುದು ಒಳ್ಳೆಯ ಪರಿಣಾಮ ಕೊಡುತ್ತದೆ. ಪರೀಕ್ಷೆಗೆ ಮೂಂಚೆ, ಕೆಲವು ನಿಮಿಷಗಳು ಧ್ಯಾನ ಮಾಡಿದಾಗ, ನಿಮ್ಮ ಯೋಚನೆ ಹಾಗು ಗೊಂದಲ ಮಾಯವಾಗಿ ಮನಸ್ಸು ತಿಳಿಯಾಗುತ್ತದೆ.
ಧ್ಯಾನವು ಅದೇ ಆಗುತ್ತದೆ. ಧ್ಯಾನದಲ್ಲಿ ಏಕಾಗ್ರತೆ ಬೇಕಾಗಿಲ್ಲ
ಧ್ಯಾನ ಅಂದರೆ ಏಕಾಗ್ರತೆ ಮಾಡುವುದು ಎಂಬ "ಸಾಮಾನ್ಯ ತಪ್ಪು ತಿಳುವಳಿಕೆ" ಹೋಗಲಾಡಿಸುವ ಸಮಯ. ಧ್ಯಾನ ಇದರ ತದ್ವಿರುದ್ಧ - ಇದು ಏಕಾಗ್ರತೆ ತ್ಯಜಿಸುವುದು, ಏಕಾಗ್ರತೆ ಹಾಗು ತಲ್ಲೀನತೆಯ ಶಕ್ತಿ ಪ್ರತಿನಿತ್ಯ ಧ್ಯಾನಸ್ಥವಾಗುವುದರಿಂದ ಬಂದ ಕೊಡುಗೆ.
ಕೆಲವೇ ನಿಮಷಗಳು ಪ್ರತಿನಿತ್ಯ ಧ್ಯಾನ ಮಾಡಿದಾಗ, ನಿಮ್ಮ ಚಂಚಲ ಮನಸ್ಸು (ಅದರಲ್ಲೂ ನಿಮಗೆ ಬೋರ್ ಆಗುವ ವಿಷಯದ ಪಾಠದಲ್ಲಿ ಎಲ್ಲೋ ಕಳೆದುಹೋಗಲು ಕಾಯುತ್ತಿರುವ ಮನಸ್ಸು) ಸ್ಥಿರವಾಗಿ ನೆಲೆಗೊಳ್ಳುತ್ತಾ ಬರುತ್ತದೆ ಮತ್ತು ಆ ಪಠ್ಯದಲ್ಲಿ ಕೇಂದ್ರೀಕೃತವಾಗುತ್ತಾ ಬರುತ್ತದೆ.
ಸಹಜ ಸಮಾಧಿ ಧ್ಯಾನದ ಶಿಕ್ಷಕಿಯಾದ ಭಾನುಮತಿ ನರಸಿಂಹನ್ ಆಗಾಗ ಹೇಳುತ್ತಾರೆ "ಧ್ಯಾನವು ಚಂಚಲ ಮನಸ್ಸನ್ನು ಕೌತುಕ ಮನಸ್ಸಾಗಿ ಮಾರ್ಪಾಡಿಸುತ್ತದೆ”
ಶ್ರೀ ಶ್ರೀ ರವಿಶಂಕರ ಗುರೂಜಿಯವರ ಪ್ರವಚನದಿಂದ ಪ್ರಭಾವಿತವಾದುದು
ಲೇಖಕಿ: ರವಿ ರಾಮಚಂದ್ರ
ಸಲಹೆಗಳು: ರಾಜಲಕ್ಷ್ಮೀ, ಸಹಜ ಸಮಾಧಿ ಧ್ಯಾನದ ಶಿಕ್ಷಕಿ ಮತ್ತು ಶ್ರೇಯಾ ಚಗ್, ರಾಷ್ಟ್ರೀಯ ನಿರ್ದೇಶಕರು, ಜೀವನ ಕಲಾ ಕೇಂದ್ರದ ಯುವ ಸಬಲೀಕರಣ ಕಾರ್ಯಕ್ರಮಗಳು..
ನಿಮಗೆ ನಿರುತ್ಸಾಹ ಅಥವ ಚಡಪಡಿಕೆ ಆಗುತ್ತಿದೆಯೆ ? ನಿಮ್ಮ ಭವನೆಗಳು ನಿಮ್ಮ ವಯಕ್ತಿಕ ಹಾಗು ನಿಮ್ಮ ಕೆಲಸದ ಮೇಲೆ ಪ್ರತಿಕೂಲ ಪರಿಣಾಮ ಮಾಡುತ್ತಿದೆಯೆ ? ಈ ಕೆಳಗಿನ ಮಾಹಿತಿಯುನ್ನು ಭರ್ತಿ ಮಾಡಿ. ಧ್ಯಾನದಿಂದ ನಿಮ್ಮ ದಿನ ನಿತ್ಯದ ಸಮಸ್ಯೆಗೆ ಪರಿಹಾರ ಕಂಡುಕೊಂಡು ನಿಮ್ಮ ಜೀವನದ ಗುಣಮಟ್ಟಾ ಸುಧಾರಿಸಬಹುದು. .