ಯಾವುದೇ ಋತುವಿನ ಬದಲಾವಣೆ ಉಂಟಾದಾಗ, ಅದು ತನ್ನೊಡನೆ ತರುವ ಖಾಯಿಲೆಯು ಬಹುತೇಕ ಜನರಲ್ಲಿ ಸರ್ವೇ ಸಾಮಾನ್ಯವಾಗಿ ಕಾಣಬಹುದು. ಬೇಸಿಗೆಯಿಂದ ಚಳಿಗಾಲದತ್ತ ತೆರಳುತ್ತಿದ್ದ ಹಾಗೆ ಅನೇಕರು ಫ್ಲೂ ಜ್ವರದಿಂದ ಮತ್ತು ಸಾಮಾನ್ಯ ನೆಗಡಿಯಿಂದ ಪೀಡಿತರಾಗುತ್ತಾರೆ. ದೇಹವು ತಾನಾಗಿಯೇ, ಅದರ ರೋಗ ನಿರೋಧಕ ವ್ಯವಸ್ಥೆಯ ಸಹಾಯದಿಂದ ಖಾಯಿಲೆಯನ್ನು ತಡೆಗಟ್ಟುವ ಕಾರ್ಯವನ್ನು ಮಾಡುತ್ತದೆ. ಆದರೆ ಖಾಯಿಲೆಯೊಡನೆ ಮತ್ತಷ್ಟು ಪರಿಣಾಮಕಾರಕವಾಗಿ ಸೆಣಸಾಡಲು ಕೆಲವು ಖಾಯಿಲೆಗಳನ್ನು ತಡೆಗಟ್ಟುವ ಕ್ರಮಗಳನ್ನು ಮತ್ತು ಗುಣಮುಖಗೊಳಿಸುವ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯ ಆಧುನಿಕ ಔಷಧಿಗಳು ಅತೀ ಪರಿಣಾಮಕಾರಕವಾಗಿದ್ದರೂ, ಇಂದಿನ ದಿನಗಳಲ್ಲಿ ಅವುಗಳು ಮಾತ್ರವೇ ಇರುವ ಆಯ್ಕೆಯಲ್ಲ. ಯೋಗಾಸನಗಳತ್ತ ಜನರು ಒಲವನ್ನು ತೋರಿ ತಮ್ಮನ್ನು ಗುಣಮುಖಗೊಳಿಸಿಕೊಳ್ಳುತ್ತಾರೆ ಮತ್ತು ತಮ್ಮ ದೇಹದ ರೋಗನಿರೋಧಕ ವ್ಯವಸ್ಥೆಯ ಮಟ್ಟವನ್ನೂ ಹೆಚ್ಚಿಸಿಕೊಳ್ಳುತ್ತಾರೆ.
ಯೋಗವು ಒಂದು ಪ್ರಾಚೀನವಾದ ಮತ್ತು ಅನುಪಮವಾದ ಪ್ರಕ್ರಿಯೆಯಾಗಿದ್ದು, ಸದೃಢಕಾಯನ್ನು ಮತ್ತು ಏಕಾಗ್ರತೆಯುಳ್ಳ ಮನಸ್ಸನ್ನೂ ಉಂಟು ಮಾಡುತ್ತದೆ. ಕೆಳಗೆ ನೀಡಲಾಗಿರುವ ಯೋಗಾಸನಗಳಿಂದ ನೀವು ನೆಗಡಿಯನ್ನು ಉತ್ತಮವಾಗಿ ನಿಭಾಯಿಸಬಹುದು.
1. ನಾಡಿಶೋಧನ ಪ್ರಾಣಾಯಾಮ
ನಾಡಿಶೋಧನ ಪ್ರಣಾಯಾಮದಿಂದ ಕಟ್ಟಿರುವ ಮೂಗು ತೆರೆದುಕೊಳ್ಳುವುದಲ್ಲದೆ, ಶ್ವಾಸಕೋಶಗಳಿಗೂ ಹೆಚ್ಚು ಆಮ್ಲಜನಕದ ಸರಬರಾಜಾಗುತ್ತದೆ. ಈ ಪ್ರಾಣಾಯಾಮದಿಂದ ಒತ್ತಡದ ಬಿಡುಗಡೆಯಾಗುವುದಲ್ಲದೆ, ದೇಹಕ್ಕೂ ವಿಶ್ರಾಂತಿ ಸಿಗುತ್ತದೆ. ನೆಗಡಿಯನ್ನು ನಿವಾರಿಸಿಕೊಳ್ಳಲು ದಿನಕ್ಕೆ ಎರಡು ಅಥವಾ ಮೂರು ಸಲ ಈ ಪ್ರಾಣಾಯಾಮದ 7-8 ಸುತ್ತುಗಳನ್ನು ಮಾಡಿ.
2. ಕಪಾಲಭಾತಿ ಪ್ರಾಣಾಯಾಮ
3. ಹಸ್ತಪಾದಾಸನ
ನೇರವಾಗಿ ನಿಂತು ಮುಂದಕ್ಕೆ ಬಗ್ಗುವ ಈ ಯೋಗಾಸನವು ತಲೆಗೆ ರಕ್ತಚಲನೆಯನ್ನು ಹೆಚ್ಚಿಸಿ, ಸೈನಸ್ಗಳನ್ನೂ ಖಾಲಿಗೊಳಿಸುತ್ತದೆ. ನರವ್ಯವಸ್ಥೆಯನ್ನು ಈ ಯೋಗಾಸನವು ಪುನಶ್ಚೇತಗೊಳಿಸುವುದರೊಡನೆ ದೇಹದ ಒತ್ತಡವನ್ನೂ ನಿವಾರಿಸುತ್ತದೆ.
4. ಮತ್ಸ್ಯಾಸನ
5. ವಿಪರೀತ ಕರಣಿ
6. ಶವಾಸನ
ಯಾವುದೇ ಋತುವು ಆರಂಭವಾದಾಗ, ಸಾಮಾನ್ಯ ನೆಗಡಿ ಅಥವಾ ಫ್ಲೂನಿಂದ ಬಾಧಿತರಾಗದೆ, ಆ ಋತುವಿನ ಆರಂಭವನ್ನು ಪೂರ್ಣವಾಗಿ ಆನಂದಿಸುವ ಅವಕಾಶವನ್ನು ಎಲ್ಲರೂ ತೆಗೆದುಕೊಳ್ಳಬೇಕು. ಯೋಗಾಸನಗಳ ನಿತ್ಯಾಭ್ಯಾಸದಿಂದ ರೋಗನಿರೋಧಕ ವ್ಯವಸ್ಥೆಯು ಬಲಿಷ್ಠವಾಗುವುದಲ್ಲದೆ, ಪರಕೀಯ ವೈರಸ್ಗಳನ್ನು ಪರಿಣಾಮಕಾರಕವಾಗಿ ಸದೆಬಡಿಯಬಹುದು.
ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಪರಿಣಾಮಕಾರಕವಾಗಿ ಹೆಚ್ಚಿಸಲು ಇರುವ ಮತ್ತೊಂದು ಸದುಪಾಯವೆಂದರೆ ನಮ್ಮ ದೇಹದ ಪ್ರಾಚೀನವಾದ, ಸಮಗ್ರವಾದ ಆಯುರ್ವೇದದ ವೈದ್ಯಕೀಯ ಪದ್ಧತಿ. ಆಲೋಪತಿಯ ಔಷಧಿಗಳು ಖಾಯಿಲೆಯ ನಿಭಾವಣೆಯ ಮೇಲೆ ಮಾತ್ರ ಗಮನವನ್ನಿಡುತ್ತದೆ. ಆದರೆ ಆಯುರ್ವೇದವು ಖಾಯಿಲೆಗಳನ್ನು ಹೇಗೆ ತಡೆಗಟ್ಟುವುದು ಎಂಬ ಜ್ಞಾನವನ್ನು ನೀಡುವುದಲ್ಲದೆ, ರೋಗದ ಮೂಲಕಾರಣವನ್ನೂ ನಿವಾರಿಸುತ್ತದೆ. ಆಯುರ್ವೇದದಿಂದ ಆರೋಗ್ಯಕರವಾದ ಜೀವನವನ್ನು ಹೇಗೆ ಪಡೆದುಕೊಳ್ಳಬಹುದೆಂದು ತಿಳಿದುಕೊಳ್ಳಲು ನಮ್ಮ ಜಾಲತಾಣಕ್ಕೆ ಭೇಟಿ ನೀಡಿ.