ಸಣ್ಣ ಪುಟ್ಟ ಕೆಲಸಗಳನ್ನು ಮಾಡುವಾಗ ನಿಮ್ಮ ಮಂಡಿ ಅಥವಾ ಭುಜಗಳು ಅಥವಾ ಮಣಿಕಟ್ಟು ನೋಯುತ್ತದೆಯೆ? ನಿಮ್ಮ ಕೀಲುಗಳ ನೋವಿನಿಂದಾಗಿ ನೀವು ಬಯಾಸಿದ ರೀತಿಯಲ್ಲಿ ಜೀವನವನ್ನು ಆನಂದಿಸಲಾಗುತ್ತಿಲ್ಲವೆ? ಒಂದು ದಿನದಲ್ಲಿ ಅನೇಕ ಸಲ ನೋವಿನ ಗುಳಿಗೆಗಳನ್ನು ನುಂಗಿ ನಿಮಗೆ ಸಾಕಾಗಿದೆಯೆ?
ಈ ಯಾವುದೇ ಪ್ರಶ್ನೆಗಳಿಗೆ ನಿಮ್ಮ ಉತ್ತರ “ಹೌದು” ಎಂದಾದರೆ, ನಿಮ್ಮ ಸ್ಥಿತಿಯು ನಿಮಗೆ ಸಾಕೆನಿಸಿ, ನೋವಿನೊಡನೆ ನಿಮ್ಮ ಸಂಬಂಧವನ್ನು ಕೊನೆಗೊಳಿಸಲು ಬಯಸುತ್ತಿರುವಿರಿ ಎಂದಾಯಿತು. ವಯಸ್ಸಾಗುತ್ತಿದ್ದಂತೆ ಕೀಲುಗಳ ನೋವು ಉಂಟಾಗುವ ಸಂಭವವೂ ಹೆಚ್ಚುತ್ತದೆ. ಕೃಶವಾದ ಮೂಳೆಗಳ ವಿನ್ಯಾಸ, ಸಾಕಷ್ಟು ದೈಹಿಕ ವ್ಯಾಯಾಮದ ಅಭಾವ, ಆಹಾರದಲ್ಲಿ ಸಾಕಷ್ಟು ಪೌಷ್ಟಿಕಾಂಶಗಳ ಕೊರತೆ. ಔಷಧಿಗಳಿಂದ ನೋವಿನ ನಿವಾರಣೆಯಾದರೂ, ಎಲ್ಲಾ ಕಾಲದಲ್ಲೂ ಪರಿಣಾಮಕಾರಕವಾಗಿರುವ ಯೋಗದಿಂದ ನೋವನ್ನು ಪೂರ್ಣವಾಗಿ ಉಪಶಮನಗೊಳಿಸಬಹುದು. ಯೋಗವು ಪ್ರಾಚೀನವಾದ ಭಾರತೀಯ ಪದ್ಧತಿಯಾಗಿದ್ದು, ಇದು ಪರಿಣಾಮಕಾರಕವಾಗಿ ನೋವಿನ ಉಪಶಮನ ಮಾಡುವುದಲ್ಲದೆ, ದೇಹವನ್ನು ಸುಸ್ಥಿತಿಯಲ್ಲಿಡುತ್ತದೆ ಮತ್ತು ಇದರಿಂದ ಮನಸ್ಸೂ ಪ್ರಶಾಂತವಾಗುತ್ತದೆ.
ಕೆಳಗೆ ನೀಡಲಾಗಿರುವ ಕೆಲವು ಮೂಲಭೂತ ಯೋಗಾಸನಗಳನ್ನು ನಿಮ್ಮ ಕೀಲುಗಳನ್ನು ಗುಣಮುಖಗೊಳಿಸಿ, ಅವುಗಳನ್ನು ಬಲಿಷ್ಠವಾಗಿಸುತ್ತವೆ
ವೀರಭದ್ರಾಸನ
ವೀರಭದ್ರಾಸನವು ಮಂಡಿಗಳನ್ನು ಬಲಿಷ್ಠವಾಗಿಸುವ ಯೋಗಾಸನವಾಗಿದ್ದು, ಫೆÇ್ರೀಜೆನ್ ಶೋಲ್ಡ್ರ್ ಎಂಬ ಭುಜಗಳ ಕೀಲುಗಳ ಒಂದು ಖಾಯಿಲೆಯಿಂದ ಬಳಲುತ್ತಿರುವವರಿಗೂ ಸಹಾಯ ಮಾಡುತ್ತದೆ. ಭುಜಗಳಲ್ಲಿರುವ ಒತ್ತಡವನ್ನು ನಿವಾರಿಸಿ, ದೇಹದಲ್ಲಿ ಸಮತೋಲನವನ್ನು ತರುತ್ತದೆ.
ಧನುರಾಸನ
ಧನುರಾಸನವು ಭುಜಗಳನ್ನು ತೆರೆದು, ಭುಜಗಳಲ್ಲಿರುವ ನೋವಿನ ನಿವಾರಣೆಯನ್ನು ಮಾಡುತ್ತದೆ. ಈ ಯೋಗಾಸನದಿಂದ ಬೆನ್ನು ಮೂಳೆಯ ನಮ್ಯತೆ ಹೆಚ್ಚುತ್ತದೆ ಮತ್ತು ದೇಹದ ಒತ್ತಡವನ್ನು, ದಣಿವನ್ನು ನಿವಾರಿಸುತ್ತದೆ.
ಸೇತುಬಂಧಾಸನ
ಸೇತುಬಂಧಾಸನವು ಮಂಡಿಗಳ ಸ್ನಾಯುಗಳನ್ನು ಬಲಿಷ್ಠಗೊಳಿಸುವುದಲ್ಲದೆ, ಆಸ್ಟಿಯೊಪೆÇರೊಸಿಸ್ ಎಂಬ ಮೂಳೆಗಳ ಸವೆತದ ಖಾಯಿಲೆಗಳಿಂದ ಬಳಲುತ್ತಿರುವವರಿಗೂ ಸಹಾಯ ಮಾಡುತ್ತದೆ. ಈ ಆಸನವು ಮೆದುಳನ್ನು ಪ್ರಶಾಂತಗೊಳಿಸುವುದಲ್ಲದೆ, ದೇಹದಲ್ಲಿ ಒತ್ತಡ ಮತ್ತು ಆತಂಕವನ್ನೂ ನಿವಾರಿಸುತ್ತದೆ.
ತ್ರಿಕೋನಾಸನ
ತ್ರಿಕೋನಾಸನವು ಕಾಲುಗಳನ್ನು, ಮಂಡಿಗಳನ್ನು ಮತ್ತು ಪಾದದ ಕೀಲುಗಳನ್ನು ಬಲಿಷ್ಠವಾಗಿಸುತ್ತದೆ. ಕಾಲುಗಳ ಹಿಂಭಾಗದಲ್ಲಿರುವ ಹ್ಯಾಮ್ಸ್ಟ್ರಿಂಗ್ ಸ್ನಾಯುಗಳನ್ನು, ಜನನೇಂದ್ರಿಯದ ಭಾಗಗಳನ್ನು ಮತ್ತು ಸೊಂಟವನ್ನು ತ್ರಿಕೋನಾಸನವು ತೆರೆಯುತ್ತದೆ. ತ್ರಿಕೋನಾಸನವು ಸಿಯಾಟಿಕದ ನೋವನ್ನು ಮತ್ತು ಬೆನ್ನು ನೋವನ್ನೂ ನಿವಾರಿಸುತ್ತದೆ.
ಉಷ್ಠ್ರಾಸನ (ಒಂಟೆ ಭಂಗಿ)
ಈ ಯೋಗಾಸನವು ಬೆನ್ನನ್ನು ಮತ್ತು ಭುಜಗಳನ್ನು ಪರಿಣಾಮಕಾರಕವಾಗಿ ಬಲಿಷ್ಠಗೊಳಿಸುವುದಲ್ಲದೆ, ಬೆನ್ನುಮೂಳೆಯ ನಮ್ಯತೆಯನ್ನು ಹೆಚ್ಚಿಸುತ್ತದೆ, ದೇಹದ ಭಂಗಿಯನ್ನು ಉತ್ತಮವಾಗಿಡುತ್ತದೆ ಮತ್ತು ಬೆನ್ನು ನೋವನ್ನೂ ಉಪಶಮನಗೊಳಿಸುತ್ತದೆ.
ಮಕರಅಧೋಮುಖಶ್ವಾನಾಸನ
ಮಕರಅಧೋಮುಖಶ್ವಾನಾಸನವು ಭುಜಗಳ ಮತ್ತು ಕಾಲುಗಳ ಹಿಂಭಾಗದ ಹ್ಯಾಮ್ಸ್ಟ್ರಿಂಗ್ ಸ್ನಾಯುಗಳ ವಿಸ್ತರಣವನ್ನು ಮಾಡುತ್ತದೆ. ಮಣಿಕಟ್ಟುಗಳನ್ನು, ತೋಳುಗಳನ್ನು, ಕಾಲುಗಳನ್ನು ಬಲಿಷ್ಠಗೊಳಿಸುವುದಲ್ಲದೆ, ದೇಹದ ದಣಿವನ್ನು ಮತ್ತು ಬೆನ್ನು ನೋವನ್ನೂ ನಿವಾರಿಸುತ್ತದೆ. ಈ ಯೋಗಾಸನವು ಆಸ್ಟಿಯೊಪೆÇರೊಸಿಸ್ನಿಂದ ಉಂಟಾಗುವ ಮೂಳೆಯ ಸವೆತವನ್ನೂ ತಡೆಯುತ್ತದೆ.
ತೆಗೆದುಕೊಳ್ಳಬೇಕಾದ ಕೆಲವು ಎಚ್ಚರಿಕೆಯ ಕ್ರಮಗಳು
ಈ ಭಂಗಿಗಳನ್ನು ಅಭ್ಯಾಸ ಮಾಡುವಾಗ ನಿಮ್ಮ ನೋವು ಉಲ್ಬಣಗೊಳ್ಳದಂತೆ ತಡೆಯಲು ಯೋಗದ ದಿಂಬುಗಳನ್ನು ಬಳಸಿ ನಿಮ್ಮ ದೇಹಕ್ಕೆ ಆಸರೆಯನ್ನು ನೀಡಿ. ನಿಮ್ಮ ದೇಹದ ಸೀಮಿತತೆಗಳನ್ನು ಗೌರವಿಸಿ ನಿಮ್ಮಿಂದ ಎಷ್ಟು ಮಾಡಲು ಸಾಧ್ಯವೊ ಅಷ್ಟೇ ಮಾಡಿ. ನೋವು ಹೆಚ್ಚಾಗ ತೊಡಗಿದರೆ ಅಭ್ಯಾಸಗಳನ್ನು ನಿಲ್ಲಿಸಿ, ವೈದ್ಯರ ಪಡೆದ ನಂತರವೇ ಪುನಃ ಆರಂಭಿಸಿ.
ನೋವು ಮುಕ್ತವಾಗಿರಲು ಕೆಲವು ನೋವನ್ನು ನೀಡದಂತಹ ಸೂಚಿಗಳು
- ಪ್ರತಿ ಗಂಟೆಗೊಮ್ಮೆ ನಿಮ್ಮ ಮೇಜಿನಿಂದ ಎದ್ದು ದೇಹದವನ್ನು ಹಿಗ್ಗಿಸಿರಿ
- ಕುಳಿತುಕೊಳ್ಳುವಾಗ, ನಿಂತುಕೊಳ್ಳುವಾಗ ಸರಿಯಾದ ಭಂಗಿಯಲ್ಲಿರಿ.
- ನಿಮ್ಮ ಕೀಲುಗಳ ಮೇಲೆ ಹೆಚ್ಚು ಒತ್ತಡವನ್ನು ಹಾಕಬೇಡಿ.
- ಆರೋಗ್ಯಕರವಾದ ಆಹಾರವನ್ನೇ ತಿನ್ನಿ.
- ನಿಮ್ಮ ಮಾಂಸ ಕಂಡಗಳನ್ನು ಸಶಕ್ತಗೊಳಿಸಿರಿ
ಸರಿಯಾಗಿ ತಿನ್ನಿ!
ಎರಡು ಮೂಳೆಗಳು ಭೇಟಿ ಮಾಡುವ ಸ್ಥಳವೇ ಕೀಲುಗಳು. ಕೀಲುಗಳಿಂದ ಆ ಭಾಗವನ್ನು ತಿರುಗಿಸಬಹುದು, ಬಗ್ಗಿಸಬಹುದು, ಸುತ್ತಬಹುದು ಮತ್ತು ಮೇಲೆ, ಕೆಳಗೆ ಜಾರಬಹುದು. ಈ ಕೀಲುಗಳನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಮತ್ತು ಸರಿಯಾದ ಚಲನೆಗಳನ್ನು ಸಂರಕ್ಷಿಸಿಕೊಳ್ಳುವುದು ಬಹಳ ಕಷ್ಟಕರವಾದ ಕೆಲಸವೇನಲ್ಲ. ಆರೋಗ್ಯಕರವಾದ ಕೀಲುಗಳನ್ನು ಹೊಂದುವ ಮೊದಲ ಹೆಜ್ಜೆಯೆಂದರೆ ಸರಿಯಾದ ಆಹಾರವನ್ನು ಸೇವಿಸುವುದು. ಸೋಂಕನ್ನು ಹೆಚ್ಚಿಸುವ ಆಹಾರಗಳಾದ ಸಕ್ಕರೆ ಮತ್ತು ಗ್ಲೂಟೆನ್ನಿಂದ ಸಮೃದ್ಧವಾದ ತರಕಾರಿಗಳನ್ನು ಕಡಿಮೆಯಾಗಿ ತಿನ್ನಬೇಕೆಂದು ತಜ್ಞರು ಹೇಳುತ್ತಾರೆ. ಸೊಪ್ಪುಗಳು ಮತ್ತು ಹಣ್ಣುಗಳು ಸೋಂಕನ್ನು/ಇನ್ಫ್ಲಮೇಷನ್ಅನ್ನು ಕಡಿಮೆ ಮಾಡುವುದರಿಂದ ಅವುಗಳನ್ನೇ ಹೆಚ್ಚಾಗಿ ತಿನ್ನುವುದು ಲೇಸು. ನಿಮ್ಮ ಜೀವನಶೈಲಿಯಲ್ಲಿ ಆಯುರ್ವೇದವನ್ನು ಅಳವಡಿಸಿಕೊಳ್ಳುವುದರಿಂದಲೂ ನೋವಿನ ಉಪಶಮನವಾಗುತ್ತದೆ.
ಆರೋಗ್ಯಕರವಾದ ಜೀವನಶೈಲಿಯನ್ನು ನಡೆಸಲು ಯೋಗವು ಒಂದು ಸಹಜವಾದ ಮತ್ತು ಅಡ್ಡ ಪರಿಣಾಮಗಳಿಲ್ಲದ ಮುಖ್ಯವಾದ ಅಂಶ. ಯೋಗಾಭ್ಯಾಸವನ್ನು ನಿತ್ಯ ಮಾಡುವುದರಿಂದ ದೇಹವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸುಸ್ಥಿತಿಯಲ್ಲಿರುತ್ತದೆ. ಯೋಗದಿಂದ ದೇಹ ದಾಢ್ರ್ಯತೆ ಹೆಚ್ಚಿ, ಜೀವನದ ಗುಣಮಟ್ಟವೂ ಹೆಚ್ಚುತ್ತದೆ. ಯೋಗದ ಪ್ರಭಾವ ಪ್ರಕಟವಾಗಲು ಸ್ವಲ್ಪ ಸಮಯ ಹಿಡಿಯುತ್ತದೆ. ಆದ್ದರಿಂದ, ಪ್ರಯತ್ನವನ್ನು ಕೈಬಿಡದೆ ನಿತ್ಯಯೋಗಾಭ್ಯಾಸವನ್ನು ಮಾಡಿ. ಯೋಗದ ಚಾಪೆಯ ಮೇಲೆ ಸ್ವಲ್ಪ ವಿಸ್ತರಣ ಮಾಡಿ, ನಿಮ್ಮ ದೇಹದ ನೋವಿನಿಂದ ನಿರಂತರವಾದ ಮುಕ್ತಿಯನ್ನು ಪಡೆಯಿರಿ!