ಈ ಒಂದು ಪ್ರಕ್ರಿಯೆಯಿಂದ ನಿಮ್ಮ ಸಕಾರಾತ್ಮಕವಾದ ಚೈತನ್ಯವನ್ನು ಉತ್ಥಾಪಿಸಿಕೊಳ್ಳಿ

ಕೆಲವೊಮ್ಮೆ ಯಾವುದೇ ನಕಾರಾತ್ಮಕತೆ, ಅದೊಂದು ದೂರಾಗಿರಲಿ ಅಥವಾ ವಾದ ವಿವಾದವಾಗಿರಲಿ, ಅದರಿಂದ ನಿಮ್ಮ ಮೇಲೆ ಯಾವ ಪ್ರಭಾವವೂ ಉಂಟಾಗುವುದಿಲ್ಲ. ಇತರ ಸಮಯಗಳಲ್ಲಿ ಸಕಾರಾತ್ಮಕವಾದ ನಿಂದನೆಯಾದರೂ ಅದು ದೊಡ್ಡ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಹೀಗೇಕೆ ಆಗುತ್ತದೆಯೆಂದು ಎಂದಾದರೂ ಆಲೋಚಿಸಿದ್ದೀರೆ?

ಇಲ್ಲ, ಇದು ನೀವು ವೀಕ್ಷಿಸಿದ ಚಲನಚಿತ್ರದ ಪ್ರಭಾವವಲ್ಲ ಅಥವಾ ನೀವು ಏನೋ ಒಂದು ಕೊಳ್ಳಲು ಹೋಗಿ ಅತೃಪ್ತರಾಗಿ ಹಿಂದಿರುಗಿದ ಕಾರಣದಿಂದಲ್ಲ. ಅದೆಲ್ಲವೂ ಕೇವಲ ಮನಸ್ಸು.

ಆಯುರ್ವೇದದ ರೀತಿಯಲ್ಲಿ ಹೇಳಬೇಕೆಂದರೆ, “ಅದೆಲ್ಲವೂ ನಮ್ಮಲ್ಲಿರುವ ಶಕ್ತಿಯ ಆಟವμÉ್ಟ”. ನಮ್ಮ ಶಕ್ತಿ ಉನ್ನತ ಮಟ್ಟದಲ್ಲಿದ್ದಾಗ ಮತ್ತು ಸಕಾರಾತ್ಮಕವಾಗಿದ್ದಾಗ ನಾವು ಸಂತೋಷವಾಗಿರುತ್ತೇವೆ, ಪ್ರಶಾಂತವಾಗಿರುತ್ತೇವೆ. ನಮ್ಮೊಳಗಿರುವ ಶಕ್ತಿಯು ಕುಸಿದಾಗ ಎಲ್ಲವೂ ನಕಾರಾತ್ಮಕವಾಗಿರುತ್ತದೆ.

ಒಳ್ಳೆಯ ಸುದ್ದಿ :- ಶಕ್ತಿಯ ಆಟವು ಶಾಶ್ವತವಲ್ಲ. ಖಂಡಿತವಾಗಿಯೂ ಶಕ್ತಿಯ ಮಟ್ಟವನ್ನು ಹೆಚ್ಚಿಸಬಹುದು. ಇದಕ್ಕೆ ಧ್ಯಾನವು ಅತೀ ಮುಖ್ಯ ಅಂಶ. “ಸಕಾರಾತ್ಮಕತ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಧ್ಯಾನವೇನಾದರೂ ನಿಮಗೆ ತಿಳಿದಿದೆಯೆ?” ಅಥವಾ “ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುವುದು ಹೇಗೆ?” ಎಂಬಂತಹ ಸಂಭಾಷಣೆಗಳು ಈಗ ಸರ್ವೆಸಾಮಾನ್ಯವಾಗಿಬಿಟ್ಟಿದೆ. ನಮ್ಮ ಧ್ಯಾನದ ಅಭ್ಯಾಸದಲ್ಲಿ ನಾವು ನಿರಂತರವಾಗಿದ್ದಷ್ಟೂ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

ಧ್ಯಾನ ಹೇಗೆ ಕೆಲಸ ಮಾಡುತ್ತದೆ?

ಧ್ಯಾನವು ಅನೇಕ ಹಂತಗಳಲ್ಲಿ ಕೆಲಸ ಮಾಡುತ್ತದೆ:-

ಧ್ಯಾನದಿಂದ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ :- ಕೆಲವು ಬದಲಾವಣೆಗಳು ದೈಹಿಕ ಮತ್ತು ಭಾವನಾತ್ಮಕ ಹಂತಗಳಲ್ಲಿ ಉಂಟಾಗುತ್ತವೆ. ಧ್ಯಾನದ ಸಮಯದಲ್ಲಿ ಚಯಾಪಚಯವು ಮಂದಗತಿಯಲ್ಲಿರುತ್ತದೆ. ಇದರಿಂದ ದೇಹದ ಎಲ್ಲಾ ಅವಯವಗಳಿಗೂ ಅವಶ್ಯಕವಾದ ವಿಶ್ರಾಂತಿ ಸಿಗುತ್ತದೆ. ಇದರಿಂದ ದೇಹಕ್ಕೆ ಶಕ್ತಿ ಬಂದು, ದೇಹವು ಪುನರುಜ್ಜೀವಿತವಾಗುತ್ತದೆ.

ಮನಸ್ಸನ್ನು ಪ್ರಶಾಂತವಾಗಿ ಮತ್ತು ಶಕ್ತಿಯುತವಾಗಿ ಮಾಡುತ್ತದೆ :- ಧ್ಯಾನವೆಂದರೆ ಮನಸ್ಸನ್ನು ವ್ಯಾಕ್ಯೂಮ್ ಕ್ಲೀನಿಂಗ್ ಮಾಡಿದಂತೆ. ಮಾನಸಿಕ ಸ್ವಚ್ಛತೆ. ಮನಸ್ಸಿನಲ್ಲಿರುವ ಸಂಸ್ಕಾರಗಳು ಅಳಿಸಿ ಹೋಗುತ್ತವೆ, ಅನಾವಶ್ಯಕವಾದ ಭಾವನಾತ್ಮಕ ಹೊರೆಯಿಂದ ಮನಸ್ಸಿಗೆ ಬಿಡುಗಡೆ ಸಿಗುತ್ತದೆ.

ಚೈತನ್ಯದಲ್ಲಿ ಮಾರ್ಪಾಟಾಗುತ್ತದೆ :- ಧ್ಯಾನದಿಂದ ಉನ್ನತ ಮಟ್ಟದ ಅರಿವುಂಟಾಗುತ್ತದೆ. ಚೈತನ್ಯದಲ್ಲಿ ಉಂಟಾಗುವ ಮಾರ್ಪಾಟಿನಿಂದ, ಮಾನವರಾಗಿ ನಾವು ಹೊಂದಿರುವ ಸಂಬಂಧಗಳ ಬಗ್ಗೆ ಹೆಚ್ಚು ಅರಿವನ್ನು ಹೊಂದುತ್ತೇವೆ. ನಾವೆಲ್ಲರೂ ಒಂದೇ ಎಂಬ ಉನ್ನತವಾದ ವಾಸ್ತವತೆಯ ಅರಿವನ್ನು ಪಡೆಯುತ್ತೇವೆ.

ಆರೋಗ್ಯಕರವಾದ ದೇಹ ಮತ್ತು ಸಂತೋಷವಾಗಿರುವ ಮನಸ್ಸು ಸಕಾರಾತ್ಮಕ ಶಕ್ತಿಯ ಮಟ್ಟಗಳನ್ನು ಹೆಚ್ಚಿಸುತ್ತವೆ. ಆದ್ದರಿಂದ ಪ್ರತಿನಿತ್ಯ ಧ್ಯಾನ ಮಾಡಬೇಕು. ಆನ್‍ಲೈನ್‍ನಲ್ಲಿ ದೊರಕುವ ಈ ಧ್ಯಾನಗಳನ್ನು ಮಾಡಬಹುದು.

ಆಯುರ್ವೇದೀಯ ರೀತಿ

ಶಕ್ತಿಯ ಮಟ್ಟವನ್ನು ಹೆಚ್ಚಿಸಿಕೊಳ್ಳುವುದರಿಂದ ಒಂದು ವ್ಯಕ್ತಿಯಲ್ಲಿ ಧ್ಯಾನವು ಸತ್ವವನ್ನು ಹೆಚ್ಚಿಸುತ್ತದೆ.

ಆಯುರ್ವೇದದ ಪ್ರಕಾರ ಪ್ರತಿಯೊಂದು ವ್ಯಕ್ತಿಯಲ್ಲೂ ಮೂರು ಗುಣಗಳಿವೆ :-

ರಜೋ ಗುಣ : ಈ ಗುಣವು ದೇಹ ಮತ್ತು ಮನಸ್ಸಿನ ಚಟುವಟಿಕೆಗೆ ಕಾರಣವಾಗುತ್ತದೆ. ಒಂದು ಮಟ್ಟದ ರಜಸ್ಸು ಇಲ್ಲದಿದ್ದರೆ ನಾವು ಚಟುವಟಿಕೆಯನ್ನು ಮಾಡಲು ಸಾಧ್ಯವಿಲ್ಲ.

ತಮೋ ಗುಣ : ಈ ಗುಣವು ದೇಹ ಮತ್ತು ಮನಸ್ಸಿನ ವಿಶ್ರಾಂತಿಗೆ ಕಾರಣ. ಒಂದು ಹಂತದ ತಮಸ್ಸು ಇಲ್ಲದಿದ್ದರೆ ನಿದ್ದೆ ಮಾಡಲು ಸಾಧ್ಯವಿಲ್ಲ. ಆದರೆ ತಮಸ್ಸು ಸಮತೋಲನದಲ್ಲಿ ಇಲ್ಲದಿರುವಾಗ ಮೋಹ, ತಪ್ಪಾದ ತಿಳಿವಳಿಕೆ, ಮಂಕುತನ, ಇತ್ಯಾದಿ ಬರುತ್ತದೆ.

ಸತ್ವ ಗುಣ : ಸತ್ವ ಗುಣವು ಸ್ಪಷ್ಟತೆ, ಜ್ಞಾನ ಮತ್ತು ಧಾರ್ಮಿಕ ಕಾರ್ಯಕ್ಕೆ ಕಾರಣ. ನಮ್ಮ ಪರಿಸರದಲ್ಲಿ ಸತ್ವವು ಪ್ರಧಾನವಾದಾಗ ಅಥವಾ ದೇಹದಲ್ಲಿ ಪ್ರಧಾನವಾದಾಗ ನಮಗೆ ಹಗುರವಾದಂತೆ, ಸಂತೋಷವಾದಂತೆ, ಪ್ರಶಾಂತರಾದಂತೆ, ಜಾಗೃತರಾದಂತೆ, ಎಚ್ಚೆತ್ತುಕೊಂಡಂತೆ ಅನಿಸುತ್ತದೆ ಮತ್ತು ಎಲ್ಲವನ್ನೂ ಸ್ಪಷ್ಟವಾಗಿ ಕಾಣಲು ತೊಡಗುತ್ತೇವೆ.

ಶಕ್ತಿಗಳ ಆಟ ನಮಗೇಕೆ ಮುಖ್ಯ?

ಸಕಾರಾತ್ಮಕ ಶಕ್ತಿ

ಹುರುಪಿನಿಂದ ಇರುವುದು

ಕೃತಜ್ಞರಾಗಿರುವುದು, ಮೆಚ್ಚುವ ಗುಣ

ನಮ್ಮನ್ನು ಮತ್ತು ನಮ್ಮ ಸುತ್ತಲೂ

ಇರುವವರನ್ನು ಸಂತೋಷವಾಗಿಡುವುದು

ಉತ್ಸಾಹದಿಂದಿರುವುದು

ಕೇಂದ್ರಿಕೃತರಾಗಿರುವುದು

ಉತ್ತಮ ಅರಿವನ್ನು ಹೊಂದುವುದು

ವಿಶ್ವಾಸದಿಂದಿರುವುದು

ಸಕಾರಾತ್ಮಕ ಶಕ್ತಿಯ ಅಭಾವ

ನಿರಂತರವಾಗಿ ದೂರುತ್ತಲಿರುವ ಪ್ರವೃತ್ತಿ

ಸ್ವ-ದೂಷಣೆ ಮತ್ತು ಇತರರನ್ನು ದೂಷಿಸುವುದು

ದೀರ್ಘಕಾಲೀನ ಆತಂಕ ಅಥವಾ ಚಿಂತೆ

ಭಯಭೀತರಾಗಿರುವುದು

ಸುಲಭವಾಗಿ ಕೋಪಿಸಿಕೊಳ್ಳುವುದು

ಜೀವನದ ಬಗ್ಗೆ ಖಿನ್ನತೆಯಿಂದ ಕೂಡಿದ ದೃಷ್ಟಿಕೋನ

ಸ್ವಭಾವತಃ ವಿಷಯಗಳನ್ನು ಪೂರ್ಣ ಮಾಡದೆ

ತಳ್ಳಿ ಹಾಕುತ್ತಲೇ ಇರುವುದು

ನಿಮ್ಮ ಸತ್ವದ ಮಟ್ಟವನ್ನು ಹೆಚ್ಚಿಸಿಕೊಳ್ಳಿ

ಸರಿಯಾಗಿ ತಿನ್ನಿ : ನಾವು ತಿನ್ನುವ ಆಹಾರವು ಮೂರು ಗುಣಗಳ ಮೇಲೆ ಮತ್ತು ಅವುಗಳ ಪ್ರಾಮುಖ್ಯತೆಯ ಬಗ್ಗೆ ಪ್ರಭಾವವನ್ನು ಬೀರುತ್ತದೆ. ಉದಾರಣೆಗೆ, ಹಸಿರು ತರಕಾರಿಗಳು, ತಾಜಾ ಹಣ್ಣುಗಳು ಹಗುರವಾಗಿರುತ್ತವೆ, ಸುಲಭವಾಗಿ ಜೀರ್ಣವಾಗುತ್ತವೆ. ಆದ್ದರಿಂದ ಅವು ಸಾತ್ವಿಕವಾಗಿರುತ್ತವೆ. ಸಕ್ಕರೆಯಿರುವಂತಹ ಆಹಾರಗಳಾದ ಸಿಹಿತಿಂಡಿಗಳು, ಹುಳಿ, ಖಾರವಿರುವ ಆಹಾರಗಳಾದ ಉಪ್ಪಿನಕಾಯಿ ರಜಸ್ಸನ್ನು ಹೆಚ್ಚಿಸುತ್ತವೆ. ಮಾಂಸಾಹಾರ, ಕರಿದ ಆಹಾರ, ಹೆಪ್ಪುಗಟ್ಟಿದ ಪದಾರ್ಥಗಳು ತಾಮಸಿಕ ಸ್ವಭಾವವನ್ನು ಹೆಚ್ಚಿಸುತ್ತವೆ.

ಚೆನ್ನಾಗಿ ಉಸಿರಾಡಿ : ನಮ್ಮ 90%ರಷ್ಟು ಪೌಷ್ಠಿಕತೆಯು ಆಮ್ಲಜನಕದಿಂದ ಬರುತ್ತದೆ. ಉಳಿದ ಶಕ್ತಿ ಆಹಾರ ಮತ್ತು ನೀರಿನಿಂದ ಬರುತ್ತದೆ. ಪ್ರಾಣಾಯಾಮಗಳು ನಮ್ಮ ಶ್ವಾಸಕೋಶದ ಸಾಮಥ್ರ್ಯವನ್ನು ವರ್ಧಿಸಿ, ಸತ್ವದ ಮಟ್ಟವನ್ನು ಹೆಚ್ಚಿಸುತ್ತದೆ. ಆರ್ಟ್ ಆಫ್ ಲಿವಿಂಗ್‍ನ ಸಂತೋಷದ ಕಾರ್ಯಾಗಾರದಲ್ಲಿ ಬೋಧಿಸಲಾಗುವ, ಶಕ್ತಿಶಾಲಿಯಾದ ಉಸಿರಾಟದ ಪ್ರಕ್ರಿಯೆಯಾದ ಸುದರ್ಶನ ಕ್ರಿಯೆಯೂ ಸಹ ದೇಹ, ಉಸಿರು ಮತ್ತು ಮನಸ್ಸಿನ ನಡುವೆ ಸಮತೋಲನವನ್ನು ತರುತ್ತದೆ.

ಧ್ಯಾನ ಮಾಡಿ : ಸತ್ವವು, ನಿಮ್ಮ ಧ್ಯಾನ ಆಳವಾದಷ್ಟೂ ಹೆಚ್ಚುತ್ತದೆ ಮತ್ತು ಸತ್ವವು ಹೆಚ್ಚಿದಾಗ ಧ್ಯಾನವು ಆಳವಾಗುತ್ತಾ ಹೋಗುತ್ತದೆ.

ಧ್ಯಾನವು ಅತೀ ಸರಳವಾದದ್ದು ಮತ್ತು ಅತೀ ಪರಿಣಾಮಕಾರಕವಾದ ಅಭ್ಯಾಸ. ನಿಮ್ಮ ಧ್ಯಾನವನ್ನು ಮತ್ತಷ್ಟು ಆಳವಾಗಿ ಹೇಗೆ ಮಾಡಿಕೊಳ್ಳುವುದೆಂದು ಇಲ್ಲಿ ತಿಳಿದುಕೊಳ್ಳಿ.

ಮುಂದಿನ ಸಲ ನೀವು ಕೆಳಗುಂದಿರುವಿರಿ ಎಂದು ನಿಮಗನಿಸಿದಾಗ ಸ್ವಲ್ಪ ನಿಲ್ಲಿ. ಚಿಕ್ಕ ಧ್ಯಾನದಿಂದ ನಿಮಗೆ ದೊರಕುವ ಲಾಭ ಅಪಾರ. ಧ್ಯಾನವನ್ನು ನಿಮ್ಮ ನಿತ್ಯಾಭ್ಯಾಸವಾಗಿ ಮಾಡಿಕೊಂಡಾಗ, ಧ್ಯಾನವನ್ನು ಮಾಡಲು ನೀವು ಪ್ರಾರಂಭಿಸಿದ ಕಾರಣವನ್ನೇ ಮರೆತು ಬಿಡುತ್ತೀರಿ.

“ಸಕಾರಾತ್ಮಕ ಶಕ್ತಿಗಾಗಿ ಧ್ಯಾನ” ಅಥವಾ “ನಕಾರಾತ್ಮಕತೆಯನ್ನು ಹೋಗಲಾಡಿಸಿಕೊಳ್ಳಲು ಧ್ಯಾನ” ಎಂಬ ಕಾರಣಗಳೆಲ್ಲವೂ ಹೊರಟು ಹೋಗುತ್ತವೆ ಮತ್ತು “ನನಗಿಷ್ಟ ಅದಕ್ಕಾಗಿ ಧ್ಯಾನ” ಎಂಬುದು ಮಾತ್ರ ಉಳಿಯುತ್ತದೆ. ಬಹುಶಃ ಎಲ್ಲದ್ದಕ್ಕಿಂತಲೂ ಇದೇ ಬಹಳ ಮುಖ್ಯ ಕಾರಣ.

ಆರ್ಟ್ ಆಫ್ ಲಿವಿಂಗ್‍ನ ಶಿಕ್ಷಕಿಯಾದ ಡಾ|| ಪ್ರೇಮ ಶೇμÁದ್ರಿಯವರು ಗುರುದೇವ್ ಶ್ರೀ ಶ್ರೀ ರವಿಶಂಕರರ ಜ್ಞಾನದ ಪ್ರವಚನಗಳಿಂದ ಸ್ಫೂರ್ತಿ ಪಡೆದು ಬರೆದ ಲೇಖನವಿದು.