ಐನ್‍ಸ್ಟೀನ್, ಪ್ಲಾಟೊ, ಆರ್ಕಿಮೆಡಿಸ್, ಮೇರಿ ಕ್ಯೂರಿ, ಚಾಲ್ರ್ಸ್ ಡಾರ್ವಿನ್, ವಿಲ್ಲಿಯಮ್ ಶೇಕ್ಸ್‍ಪಿಯರ್‍ನಂತಹ ಚಿಂತಕರನ್ನು ನಾವೆಲ್ಲರೂ ಮೆಚ್ಚುತ್ತೇವೆ. ಈ ಬುದ್ಧಿವಂತರಾದ, ಸೃಜನಶೀಲರಾದ, ಅಂತಃಸ್ಫುರಣೆಯಿಂದ ತುಂಬಿದ ವ್ಯಕ್ತಿಗಳು ತಮ್ಮ ಪ್ರಭಾವಶೀಲವಾದ ಆಲೋಚನೆಗಳಿಂದ ಜಗತ್ತಿನ ರೀತಿಗಳನ್ನು ಬದಲಿಸಿದರು. ಆಲೋಚಿಸುವುದು ಸಕಾರಾತ್ಮಕವಾದ ಗುಣವಾದರೂ, ವಿಪರೀತವಾಗಿ ಆಲೋಚಿಸುವುದು ಸಕಾರಾತ್ಮಕವಾದ ಗುಣವಲ್ಲ.
ವಿಪರೀತವಾಗಿ ಆಲೋಚನೆಗಳು ದಾಳಿ ನಡೆಸುತ್ತಿರುತ್ತವೆ. ವಿಪರೀತವಾಗಿ ಆಲೋಚಿಸುವುದರಿಂದ ಮನಸ್ಸಿನ ಸ್ಪಷ್ಟತೆ ಉಂಟಾಗುವುದಿಲ್ಲ, ತಾರ್ಕಿಕವಾದ ಪರಿಹಾರವನ್ನೂ ಕಂಡುಕೊಳ್ಳಲಾಗುವುದಿಲ್ಲ. ಹೀಗೆಯೆ ಆಲೋಚಿಸುತಲಿದ್ದರೆ ಗೀಳನ್ನು, ತಿರಸ್ಕಾರವನ್ನು ಮತ್ತು ಅನಾವಶ್ಯಕವಾದ ಆಲೋಚನೆಯು ಉಂಟಾಗುತ್ತದೆ. ವಿಪರೀತವಾಗಿ ಆಲೋಚಿಸುವ ಮನಸ್ಸಿಗೆ ಸರಿಯಾಗಿ ವಿಷಯವನ್ನು ಗ್ರಹಿಸಲು ಸಾಧ್ಯವಾಗುವುದಿಲ್ಲ. ಗತವನ್ನು ಬದಲಿಸಲು ಸಾಧ್ಯವಿಲ್ಲ, ಭವಿಷ್ಯ ಯಾರಿಗೂ ತಿಳಿದಿಲ್ಲ. ಆದರೂ ಮನಸ್ಸು ಆಲೋಚನೆಗಳ ಸುಳಿಯಲ್ಲಿ ಕಳೆದು ಹೋಗುತ್ತದೆ. ನಿಮ್ಮ ಗತದ ತಪ್ಪುಗಳಿಂದ ಕಲಿಯುವುದರ ನಡುವೆ ಮತ್ತು ಅವುಗಳ ಗೀಳನ್ನು ಬೆಳೆಸಿಕೊಳ್ಳುವುದರ ನಡುವೆ ಒಂದು ಸಣ್ಣ ಎಳೆಯಿದೆ.
ಒಂದು ಮಗುವನ್ನು ಗಮನಿಸಿದ್ದರೆ, ಒಂದು ಮಗುವಿನ ಮನಸ್ಸಿನಲ್ಲಿ ಕೇವಲ “ಇಂದಿನ ದಿನ” ಮಾತ್ರವಿದೆ. ಮಗುವಿನಲ್ಲಿ ಗತದ ಅಥವಾ ಭವಿಷ್ಯದ ಆಲೋಚನೆ ಇರುವುದಿಲ್ಲ. ಮಗುವು ಕೇವಲ ವರ್ತಮಾನದಲ್ಲಿ ಜೀವಿಸುತ್ತದೆ. ನಾವೆಲ್ಲರೂ ಸಹ ಮಕ್ಕಳಾಗಿದ್ದೆವು. ನಾವೆಲ್ಲರೂ ವರ್ತಮಾನದಲ್ಲಿ ಜೀವಿಸುವ ಸಾಮಥ್ರ್ಯವನ್ನು ಹೊಂದಿದ್ದೇವೆ ಮತ್ತು ವಿಪರೀತವಾಗಿ ಆಲೋಚಿಸುವ ಒತ್ತಡದಿಂದ ನಾವು ಹೊರಬರಬಲ್ಲೆವು. ಹೇಗೆ? ವಿಪರೀತವಾಗಿ ಆಲೋಚಿಸುವುದನ್ನು ತಡೆಯಲು ಧ್ಯಾನ ಮಾಡಿ ನೋಡಿ. ಮತ್ತೆ ಸರಳತೆಯಿಂದಿದ್ದ ದಿನಗಳಿಗೆ ಮರಳಿ ಹೋಗುತ್ತೀರಿ.
ವಿಪರೀತವಾಗಿ ಆಲೋಚಿಸುವುದನ್ನು ಧ್ಯಾನವು ನಾಲ್ಕು ರೀತಿಗಳಲ್ಲಿ ತಡೆಯುತ್ತದೆ
ನಿಮ್ಮ ದೃಷ್ಟಿಕೋನವನ್ನು ಸರಿಪಡಿಸುತ್ತದೆ
ವಿಪರೀತವಾಗಿ ಆಲೋಚಿಸುವುದರಿಂದ ನಿಮ್ಮ ಮನವೆಲ್ಲಾ ಅನಾವಶ್ಯಕವಾದ ಆಲೋಚನೆಗಳಿಂದ, ಯೋಜನೆಗಳಿಂದ ತುಂಬಿರುತ್ತದೆ. ಭ್ರಮೆಗಳಿಂದ, ಸಂಶಯಗಳಿಂದ, ಪಶ್ಚಾತ್ತಾಪಗಳಿಂದ, ವಿಕೃತವಾದ ವಾಸ್ತವತೆಯಿಂದ ಒತ್ತಡಕ್ಕೆ ಒಳಗಾಗುತ್ತೀರಿ. ಈ ಯಾವುದರಿಂದಲೂ ಶಾಂತವಾದ, ಸಂತೋಷವಾದ ಜೀವನವನ್ನು ನಡೆಸಲು ಸಾಧ್ಯವಿಲ್ಲ. ಜೀವನದ ಬೃಹತ್ ಚಿತ್ರಣದ ದೃಷ್ಟಿಯನ್ನು ಧ್ಯಾನವು ನಿಮಗೆ ನೀಡುತ್ತದೆ. ನಿಮ್ಮ ಆಲೋಚನೆಗಳು ನಿಮ್ಮನ್ನು ಬಿಗಿಹಿಡಿದು ಕುಂಠಿತಗೊಳಿಸುತ್ತಿವೆಯೆಂದು ಅರಿಯುತ್ತೀರಿ. ಜೀವನದ ಬಗ್ಗೆ ಶೋಧಿಸಲು ಸಿದ್ಧರಾದಾಗ ಜೀವನದಲ್ಲಿ ಹೆಚ್ಚಾಗಿ ಸಾಧಿಸಬಹುದು.
ನಕಾರಾತ್ಮಕವಾದ ಆಲೋಚನೆಗಳಿಂದ ಹೊರ ಬರುತ್ತೀರಿ
ನಮ್ಮ ಜೀವನಗಳಲ್ಲಿ ನಡೆಯುತ್ತಿರುವ ಕೋಲಾಹಲಕ್ಕಾಗಿ ಯಾರ ಮೇಲೆ ದೋಷವನ್ನು ಹರಿಸುವುದು ಎಂದು ನೋಡುತ್ತಲಿರುತ್ತೇವೆ. ಇತರರ ಮೇಲೆ ದೂಷಣೆಯನ್ನು ಹೊರಿಸಿದಾಗ ವಿಷಯಗಳನ್ನು ಸುಲಭವಾಗಿ ನಿಭಾಯಿಸಬಹುದು ಎನಿಸುತ್ತದೆ. ತಪ್ಪುಗಳನ್ನು ಕಂಡು ಹಿಡಿಯುವ, ಇತರರತ್ತ ಬೆಟ್ಟು ಮಾಡಿ ತೋರಿಸುವಂತಹ ನಕಾರಾತ್ಮಕ ಪ್ರವೃತ್ತಿಗಳಿಂದ ಹೊರಬರಲು ಧ್ಯಾನ ಸಹಾಯ ಮಾಡುತ್ತದೆ. ಪ್ರಜ್ಞಾಪೂರ್ವಕವಾದ ಧ್ಯಾನವನ್ನು ಮಾಡಿ. ವಿಪರೀತವಾಗಿ ಆಲೋಚಿಸುವುದನ್ನು ಧ್ಯಾನವು ತಡೆಯುತ್ತದೆ. ಜಾಗೃತಿಯಿರುವ ಈ ಆಕಾಶದಲ್ಲಿ ನಕಾರಾತ್ಮಕ ಆಲೋಚನೆಗಳನ್ನು ತೆಗೆದುಹಾಕಬಹುದು ಮತ್ತು ಉನ್ನತವಾದ ಸತ್ಯಗಳನ್ನು ಅರಸಬಹುದು, ಉನ್ನತವಾದ ಆಲೋಚನೆಗಳ ಮೇಲೆ, ಕಾರ್ಯಗಳ ಮೇಲೆ ಗಮನವನ್ನಿಡಲು ಸಾಧ್ಯವಾಗುತ್ತದೆ.
ನಿಮ್ಮ ಮನಸ್ಸನ್ನು ನಿರಾಳವಾಗಿ ಮಾಡಿಕೊಳ್ಳಿ
ವಿಪರೀತವಾಗಿ ಆಲೋಚಿಸುತಲಿದ್ದರೆ, ನಿಮ್ಮ ಮನಸ್ಸಿನೊಳಗೆ ಏನೋ ಒಂದು ಕೊರೆಯುತ್ತಿದೆ ಎಂದರ್ಥ. ನಿಮ್ಮ ಅಹಿತವಾದ ಭಾವನೆಯನ್ನು ಗಮನಿಸಿ ಅದನ್ನು ನೇರವಾಗಿ ನಿಭಾಯಿಸಿ. ಧ್ಯಾನದಿಂದ ನಿಮ್ಮ ಮನಸ್ಸು ನಿರಾಳವಾಗುತ್ತದೆ. ನಿಮ್ಮ ತಲೆಯು ಸುಸ್ಪಷ್ಟವಾಗುವುದರಿಂದ ಎಲ್ಲವನ್ನೂ ಸರಿಯಾಗಿ ಆಯೋಜಿಸಬಹುದು, ಮೊದಲು ಯಾವುದಕ್ಕೆ ಆದ್ಯತೆ ನೀಡಬೇಕೆಂದು ತಿಳಿದುಕೊಳ್ಳಬಹುದು, ಸಮರ್ಪಕವಾಗಿ ವಿಷಯಗಳ ವಿಮರ್ಶೆಯನ್ನು ಮಾಡಬಹುದು. ಒಮ್ಮೆ ಸಮಸ್ಯೆಯನ್ನು ಗುರುತಿಸಿದ ನಂತರ ಅದನ್ನು ಸರಿಪಡಿಸಲು ಕ್ರಮಗಳನ್ನು ತೆಗೆದುಕೊಳ್ಳಬಹುದು. ಇದರಿಂದ ಅನಾವಶ್ಯಕವಾಗಿ ಅಸಂಬದ್ಧವಾದ, ನಕಾರಾತ್ಮಕ ಆಲೋಚನೆಗಳಲ್ಲಿ ತೇಲುವುದನ್ನು ತಡೆಯಬಹುದು.
ಮೋಹದಿಂದ ಮುಕ್ತರಾಗುತ್ತೀರಿ
ವಿಪರೀತವಾಗಿ ಆಲೋಚಿಸುವುದು ನಿಮ್ಮಲಿರುವ ಮೋಹದ ಸೂಚಕ - ನಿಮ್ಮ ಮಾತುಗಳ ಮೇಲಿನ, ಕಾರ್ಯಗಳ ಮೇಲಿನ, ಆಲೋಚನೆಗಳ ಮೇಲಿನ ಮತ್ತು ಯೋಜನೆಗಳ ಮೇಲಿನ ವ್ಯಾವೋಹದ ಸೂಚಕ. ಜನರ ಬಗ್ಗೆ, ಸಂಬಂಧಗಳ ಬಗ್ಗೆ ಅಷ್ಟೊಂದು ವ್ಯಾವೋಹವನ್ನು ಹೊಂದಿರುತ್ತೇವೆ. ಇದರಿಂದ ವಿವೇಚನೆಯ ಮೇಲೆ, ತೀರ್ಪನ್ನು ತೆಗೆದುಕೊಳ್ಳುವುದರ ಮೇಲೆ ಪ್ರಭಾವ ಉಂಟಾಗಿ, ನಾವು ವಿಪರೀತ ವಿಮರ್ಶೆಯನ್ನು, ವಿಪರೀತ ಟೀಕೆಯನ್ನು ಮಾಡಲಾರಂಭಿಸುತ್ತೇವೆ.
ಸಂಬಂಧಗಳ ಬಗ್ಗೆ ನಿರ್ಮೋಹಿಗಳಾಗುವುದು ಹೇಗೆ? ಧ್ಯಾನದಿಂದ ವಿಪರೀತ ವ್ಯಾಮೋಹದ, ವಿಪರೀತವಾಗಿ ಆಲೋಚಿಸುವುದರ ಚಕ್ರದಿಂದ ಹೊರಬರಲು ಸಾಧ್ಯ. ಮನಸ್ಸಿನ ಸ್ಪಷ್ಟತೆ ಸಿಗುತ್ತದೆ, ನಿಮ್ಮ ಮಾನಸಿಕ ವ್ಯಾಪಕತೆಯನ್ನು ಹೆಚ್ಚಿಸುತ್ತದೆ. ಇದರಿಂದ ಜೀವನದ ಅನಂತ ಸಾಧ್ಯತೆಗಳನ್ನು ನೀವು ಶೋಧಿಸಬಹುದು.
ನೆನಪಿನಲ್ಲಿಟ್ಟುಕೊಳ್ಳಬೇಕಾದ ಮೂರು ಸೂಚಿಗಳು
1) ವಿಪರೀತವಾಗಿ ಆಲೋಚಿಸುವ ಪ್ರವೃತ್ತಿಯು ಆರಂಭವಾದ ನಂತರವೇ ಧ್ಯಾನ ಮಾಡಬೇಕೆಂದುಕೊಳ್ಳಬೇಡಿ.
2) ಪ್ರತಿನಿತ್ಯ 20 ನಿಮಿಷಗಳ ಕಾಲ ಧ್ಯಾನವನ್ನು ಅಭ್ಯಾಸ ಮಾಡಿ ನಿಮ್ಮ ಆತಂಕಗಳನ್ನು ಬಿಡುಗಡೆಗೊಳಿಸಿ. ಒತ್ತಡ ಹೆಚ್ಚಿದಾಗ ವಿಪರೀತವಾಗಿ ಆಲೋಚಿಸಲಾರಂಭಿಸುತ್ತೀರಿ, ವಿಪರೀತವಾಗಿ ವಿಮರ್ಶೆ ಮಾಡಲಾರಂಭಿಸುತ್ತೀರಿ. ನೀವು ಧ್ಯಾನವನ್ನು ಮಾಡಲು ಹೊಸತಾಗಿ ಆರಂಭಿಸುತ್ತಿದ್ದರೆ, ಒತ್ತಡ ನಿವಾರಣೆ ಮತ್ತು ವಿಪರೀತವಾಗಿ ಆಲೋಚಿಸುವುದನ್ನು ತಪ್ಪಿಸಲು ನಿರ್ದೇಶಿತವಾದ ಧ್ಯಾನವನ್ನು ಮಾಡಿ.
3) ಒಳ್ಳೆಯ ಭಾವನೆಯ ಬಗ್ಗೆ ಕುರಿತು ವಿಪರೀತವಾಗಿ ಆಲೋಚಿಸುವುದರಿಂದ ವಿಷಯಗಳು ತಿರುಗು ಮುರುಗಾಗಬಹುದು. ಮುಂಬರುವ ಪ್ರತಿಯೊಂದು ಅನುಭವವನ್ನು ಇದರೊಡನೆ ಹೋಲಿಸಲಾರಂಭಿಸಿಕೊಳ್ಳುತ್ತೀರಿ. ಎಲ್ಲಾ ಅನುಭವಗಳೂ ನಿಮ್ಮ ಎದುರು ನೋಡುವಿಕೆಯ ಹಂತದಲ್ಲಿ ಇರುವುದಿಲ್ಲ. ಆದ್ದರಿಂದ ವಿಪರೀತವಾಗಿ ಆಲೋಚಿಸುವ ಲೋಪ ದೋಷಗಳ ಬಗ್ಗೆ ತಿಳಿಯಿರಿ.
ಆರ್ಟ್ ಆಫ್ ಲಿವಿಂಗ್‍ನ ಸಹಜ ಸಮಾಧಿ ಧ್ಯಾನವು ನಿಮ್ಮ ಕೊನೆಯಿಲ್ಲದ ಆಲೋಚನೆಗಳನ್ನು ಮೌನವಾಗಿಸುತ್ತವೆ. ವಿಶ್ರಾಂತಿಯಿಂದ, ಪುನಶ್ಚೇತದಿಂದ ನಿಮ್ಮ ಮನಸ್ಸು ಹಗುರವಾಗುತ್ತದೆ.
ನಿಮ್ಮ ಸ್ಥಳದ ಬಳಿಯೇ ಸಹಜ ಸಮಾಧಿಯ ಧ್ಯಾನದ ಕಾರ್ಯಕ್ರಮವನ್ನು ಕಂಡುಹಿಡಿಯಿರಿ.