ಪ್ರಯತ್ನರಹಿತವಾಗಿ ಧ್ಯಾನ ಮಾಡುವುದು ಹೇಗೆ?

ಧ್ಯಾನ ಮಾಡುವುದು ಹೇಗೆಂದು ನೋಡುವ ಮೊದಲು, ಧ್ಯಾನದ ಬಗ್ಗೆ ಬಹಳವಾಗಿ ಪ್ರಚಲಿತವಾಗಿರುವ ಒಂದು ತಪ್ಪಾದ ಪರಿಕಲ್ಪನೆಯ ಬಗ್ಗೆ ಸತ್ಯವನ್ನು ತಿಳಿಸಲು ಬಯಸುತ್ತೇವೆ. ಈ ತಪ್ಪಾದ ಪರಿಕಲ್ಪನೆಯ ಬಗ್ಗೆ ಸರಿಯಾಗಿ ತಿಳಿದುಕೊಂಡಲ್ಲಿ, ಧ್ಯಾನ ಮಾಡುವುದು ಹೇಗೆಂದು ಅರ್ಥ ಮಾಡಿಕೊಳ್ಳುತ್ತೀರಿ.

ತಪ್ಪಾದ ಪರಿಕಲ್ಪನೆ

ಧ್ಯಾನ ಮಾಡುವುದೆಂದರೆ ಏಕಾಗ್ರರಾಗಿರುವುದು ಎಂಬ ಪರಿಕಲ್ಪನೆಯನ್ನು ಬಹುತೇಕ ಜನರು ಹೊಂದಿದ್ದಾರೆ. ಧ್ಯಾನವೆಂದರೆ ಏಕಾಗ್ರತೆಯಲ್ಲ. ಧ್ಯಾನವೆಂದರೆ ಏನನ್ನೂ ಮಾಡದಿರುವ ಒಂದು ಕಲೆ. ಧ್ಯಾನದಿಂದ ತನಾಗಿಯೇ ಹೊರಬರುವ ಒಂದು ಉತ್ಪನ್ನವೇ ಏಕಾಗ್ರತೆ.

ಹಾಗಿದ್ದರೆ, ಏನನ್ನೂ ಮಾಡದಿರುವ ಕಲೆಯನ್ನು ಕಲಿಯುವುದು ಹೇಗೆ?

ಧ್ಯಾನ ಮಾಡುವುದು ಹೇಗೆ?

ಧ್ಯಾನ ಮಾಡುವ ಅನೇಕ ರೀತಿಗಳಿವೆಯಾದರೂ, ಧ್ಯಾನ ಮಾಡುವ ಅತೀ ಸುಲಭವಾದ ರೀತಿಯೆಂದರೆ (ಅದರಲ್ಲೂ ನೀವು ಈಗ ತಾನೆ ಧ್ಯಾನ ಮಾಡಲು ಆರಂಭಿಸುತ್ತಲಿದ್ದರೆ), ನಿರ್ದೇಶಿತವಾದ ಧ್ಯಾನವನ್ನು ಮಾಡುವುದು. ನಿರ್ದೇಶಿತವಾದ ಧ್ಯಾನದಲ್ಲಿ ನಿಮ್ಮ ಕಣ್ಣುಗಳನ್ನು ಮುಚ್ಚಿ ಕುಳಿತುಕೊಳ್ಳಬೇಕು ಮತ್ತು ನೀವು ಕೇಳಿಸಿಕೊಳ್ಳುತ್ತಿರುವ ಸೂಚನೆಗಳನ್ನು ಪಾಲಿಸಬೇಕು.

ನೀವಾಗಿಯೇ ಧ್ಯಾನ ಮಾಡಲು, ತರಬೇತಿ ಪಡೆದ ಧ್ಯಾನದ ತಜ್ಞರಿಂದಲೇ ಕಲಿಯಬೇಕು. ಸಹಜ ಸಮಾಧಿ ಧ್ಯಾನದ ಕಾರ್ಯಕ್ರಮದಲ್ಲಿ ಭಾಗವಹಿಸಿ. ಧ್ಯಾನದ ಅನುಭವವನ್ನು ಅಂತರಾಳದಲ್ಲಿ ಪಡೆಯಲು ಈ ಮೂರು ಸೂತ್ರಗಳನ್ನು ಧ್ಯಾನ ಮಾಡುವ ಮೊದಲು ನೆನಪಿಗೆ ತಂದುಕೊಳ್ಳಿ:-

1) “ನನಗೇನೂ ಬೇಡ” - ನಿಮ್ಮ ಎಲ್ಲಾ ಬಯಕೆಗಳನ್ನೂ, “ಒಳ್ಳೆಯ” ಧ್ಯಾನ ಆಗಬೇಕೆಂಬ ಬಯಕೆಯನ್ನೂ ಸಹ ಧ್ಯಾನ ಮಾಡುವ ಸಮಯದಲ್ಲಿ ಬದಿಗಿಟ್ಟು ಬಿಡಿ. ಏನನ್ನೂ ತಿಳಿದುಕೊಳ್ಳುವುದು ಬೇಡ ಅಥವಾ ಯಾವ ಯೋಜನೆಯನ್ನೂ ಧ್ಯಾನ ಮಾಡುವ ಸಮಯದಲ್ಲಿ ಮಾಡುವುದು ಬೇಡ.

2) “ನಾನು ಏನನ್ನೂ ಮಾಡುವುದಿಲ್ಲ” – ಎಲ್ಲಾ ಪ್ರಯತ್ನವನ್ನೂ ಬಿಡಿ.

3) “ನಾನು ಏನೂ ಅಲ್ಲ” - ನೀವು ಯಾರು ಎಂದು ನಿಮ್ಮ ಮೇಲೆಯೇ ಹಚ್ಚಿಕೊಂಡಿರುವ ಎಲ್ಲಾ ಪಟ್ಟಿಗಳನ್ನೂ ಬಿಟ್ಟುಬಿಡಿ.

ಸಹಜ ಸಮಾಧಿ ಧ್ಯಾನದ ಕಾರ್ಯಕ್ರಮ

 ಸಹಜ ಸಮಾಧಿ ಧ್ಯಾನದ ಕಾರ್ಯಕ್ರಮದಲ್ಲಿ, ಧ್ಯಾನ ಮಾಡುವ ಅತೀ ಪ್ರಯತ್ನರಹಿತವಾದ ಹಾಗೂ ಪರಿಣಾಮಕಾರಕವಾದ ರೀತಿಯನ್ನು ಹೇಳಿಕೊಡಲಾಗುತ್ತದೆ. ಈ ರೀತಿಯ ಧ್ಯಾನದಲ್ಲಿ ಧ್ಯಾನದ ತಜ್ಞರು ನಿಮಗೆ ಒಂದು ವೈಯಕ್ತಿಕವಾದ ಮಂತ್ರವನ್ನು ಕೊಡುತ್ತಾರೆ. ಮಂತ್ರದಿಂದ ಮನಸ್ಸು ಪ್ರಯತ್ನರಹಿತವಾಗಿ ವಿಶ್ರಮಿಸುತ್ತದೆ ಮತ್ತು ಮನಸ್ಸು ಶೇಖರಿಸಿಟ್ಟುಕೊಂಡಿರುವ ಎಲ್ಲಾ ಒತ್ತಡಗಳನ್ನೂ ಬಿಟ್ಟು ಬಿಡುತ್ತದೆ. ಸಹಜ ಸಮಾಧಿ ಧ್ಯಾನದ ನಿತ್ಯಾಭ್ಯಾಸ ಮಾಡಿದರೆ ನಿಮ್ಮ ಒತ್ತಡಕ್ಕೆ ಸಂಬಂಧಪಟ್ಟಿರುವ ಎಲ್ಲಾ ಸಮಸ್ಯೆಗಳ ನಿವಾರಣೆಯಾಗುತ್ತದೆ, ಮನಸ್ಸಿಗೆ ಆಳವಾದ ವಿಶ್ರಾಂತಿ ಸಿಗುತ್ತದೆ ಮತ್ತು ವ್ಯವಸ್ಥೆಯೂ ಪುನಶ್ಚೇತಗೊಳ್ಳುತ್ತದೆ. ಮೂರು ದಿವಸಗಳ ಕಾರ್ಯಕ್ರಮವು ಇದಾಗಿದ್ದು, ಆರು ಗಂಟೆಗಳ ಸಹಜ ಸಮಾಧಿ ಧ್ಯಾನವು ವಿಶೇಷವಾಗಿ ನಿಯೋಜಿಸಲಾಗಿರುವ ಧ್ಯಾನದ ಪ್ರಕ್ರಿಯೆಯಾಗಿದ್ದು, ನಿಮ್ಮ ಅಂತರಾಳದೊಳಗೆ ಧುಮುಕಿ, ನಿಮ್ಮ ನಿಸ್ಸೀಮಿತವಾದ ಸಾಮಥ್ರ್ಯವನ್ನು ಹೊರತರಲು ಸಾಧ್ಯವಾಗುತ್ತದೆ.